ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ

bkt-31-15
ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠದ ಬೃಂದಾವನಕ್ಕೆ ವಿಶೇಷ ಪುಷ್ಪಾಲಂಕಾರ ನೆರವೇರಿಸಲಾಯಿತು.
Published on

ಬಾಗಲಕೋಟೆ: ನಗರದ ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಳ ೩೫೨ನೇ ಆರಾಧನೆ ಮಹೋತ್ಸವದ ಮೊದಲದಿನವಾದ ಪೂರ್ವಾರಾಧನೆ ನಿಮಿತ್ತ ಗುರು ರಾಯರ ಮಠಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ರಾಯರ ಬೃಂದಾವನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಠದ ಅಧ್ಯಕ್ಷ ಹರಿ ಪಾಟೀಲ, ಕಾರ್ಯದರ್ಶಿ ಡಿ.ಬಿ.ಕುಲಕರ್ಣಿ,ಉಪಾಧ್ಯಕ್ಷ ಪಿ.ಎಮ್.ದೇಶಪಾಂಡೆ ಸದಸ್ಯರಾದ
ಕೆ.ಬಿ.ದೇಸಾಯಿ, ಅರವಿಂದ ಕುಲಕರ್ಣಿ, ಜಿ.ಆರ್.ದೇಶಪಾಂಡೆ.ವಿನಾಯಕ ಬೋಕರೆ, ಅಭಿಷೇಕ ಪಾಟೀಲ, ದ.ರಾ.ಪುರೋಹಿತ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net