ರಾಗಿಗುಡ್ಡ ಅತಿಕ್ರಮಣ ಸಮೀಕ್ಷೆ ಮಾಡಿ

26 smg 6
Published on

ಶಿವಮೊಗ್ಗ: ರಾಗಿಗುಡ್ಡದ ಅತಿಕ್ರಮಣ ಬಗ್ಗೆ ಸಮೀಕ್ಷೆ ಮಾಡಿ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚಿಸಿದರು.

ನಗರಪಾಲಿಕೆ ಸಭಾಂಗಣದಲ್ಲಿ ಗುರುವಾರ ಹಸಿರೀಕರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡ ಹಾಗೂ ಕಲ್ಲೂರು ಮಂಡ್ಲಿ ಗುಡ್ಡಗಳನ್ನು ಜೀವವೈವಿಧ್ಯ ತಾಣಗಳೆಂದು ಗುರುತಿಸಿ ಜೀವವೈವಿಧ್ಯ ಸಮಿತಿಯವರು ಬೋರ್ಡ್ ಹಾಕಬೇಕು ಎಂದು ಹೇಳಿದರು.

ಗ್ರೀನ್ ಬೆಲ್ಟ್ ಯೋಜನೆಗೆ ಭೂ ಮಾಪನ ಇಲಾಖೆ ಹಾಗೂ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಸೂಕ್ತ ಸಹಕಾರ ನೀಡಬೇಕು. ಸ್ಥಳೀಯ ಜೀವವೈವಿಧ್ಯ ಸಮಿತಿ ಸದಸ್ಯರು, ನಗರ ಪಾಲಿಕೆ ಸದಸ್ಯರೊಂದಿಗೆ ಪಾರ್ಕ್​ಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಲು ಮುಂದಾಗಬೇಕು. ಹೊಂಗೆ ಮರದ ಉಪಯುಕ್ತತೆ ಹೆಚ್ಚಿರುವುದರಿಂದ ಪಾರ್ಕ್ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಹೊಂಗೆ ಗಿಡಗಳನ್ನು ನೆಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಜೀವ ವೈವಿಧ್ಯ ಸಮಿತಿ ಸದಸ್ಯ ಡಾ. ಎಲ್.ಕೆ.ಶ್ರೀಪತಿ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್, ಡಿಸಿಎಫ್ ಜಿ.ಯು.ಶಂಕರ್, ಐ.ಎಂ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net