ರಾಗಿ ಬೆಳೆಯಲು ಒತ್ತು ನೀಡಲಿ

13ark1
ಅರಕಲಗೂಡು ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ರೈತರಿಗೆ ಶಾಸಕ ಎ. ಮಂಜು ರಾಗಿ ಮಿನಿ ಕಿಟ್ ವಿತರಿಸಿದರು. ರಮೇಶ್ ಕುಮಾರ್, ಮಗ್ಗೆ ರಾಜೇಗೌಡ, ಬಸವರೆಡ್ಡಪ್ಪ ರೋಣದ ಇದ್ದರು.
Published on

ಅರಕಲಗೂಡು: ಉತ್ತಮ ಆರೋಗ್ಯದ ದೃಷ್ಟಿಯಿಂದ ರೈತರು ಪ್ರಮುಖ ಆಹಾರ ಬೆಳೆ ರಾಗಿ ಬೆಳೆಯಲು ಒತ್ತು ನೀಡಬೇಕು ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.


ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಗಿ ಮಿನಿ ಕಿಟ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಹಾರ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಬೇಕಾಗಿದೆ. ರೈತರು ವಾಣಿಜ್ಯ ಬೆಳೆಗಳ ಜತೆಗೆ ಆಹಾರ ಬೆಳೆಗಳನ್ನು ಬೆಳೆಯಬೇಕು.ರಾಗಿ ಪೌಷ್ಟಿಕಾಂಶಗಳ ಖಣಜವಾಗಿದ್ದು ಆರೋಗ್ಯಕ್ಕೆ ಅನುಕೂಲಕರವಾಗಿದೆ. ಉತ್ತಮ ತಳಿಯ ರಾಗಿ ಬಿತ್ತನೆ ನಡೆಸಿ ಹೆಚ್ಚು ಇಳುವರಿ ಗಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ಗಿರಿಧರ್, ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net