

ಹುಳಿಯಾರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಸರ್ಕಾರ 2ನೇ ಹಂತದ ನೋಂದಣಿ ಆರಂಭಿಸಿದ 27 ಗಂಟೆಯೊಳಗೆ ಸ್ಥಗಿತಗೊಳಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲ ಹಂತದ ರಾಗಿ ಖರೀದಿ ಪ್ರಕ್ರಿಯೆ ಮುಗಿದು ರೈತರ ಖಾತೆಗಳಿಗೆ ಹಣ ವರ್ಗಾವಣೆಯಾದ ನಂತರ 2ನೇ ಹಂತದ ಖರೀದಿಗಾಗಿ ನೋಂದಣಿ ಕಾರ್ಯಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಆದರೆ ಏ.25 ರಂದು ನೋಂದಣಿ ಆರಂಭಿಸುವುದಾಗಿ ಸರ್ಕಾರ ೂಷಿಸಿದ್ದರೂ ಏ.26ರ ಮಧ್ಯಾಹ್ನದವರೆವಿಗೂ ನೋಂದಣಿ ಆರಂಭವಾಗಲಿಲ್ಲ. ಪರಿಣಾಮ 3377 ರೂ. ಬೆಂಬಲ ಬೆಲೆಯಲ್ಲಿ ರಾಗಿ ಮಾರುವ ಉತ್ಸಾಹದೊಂದಿಗೆ ಎಪಿಎಂಸಿಗೆ ಲಗ್ಗೆಯಿಟ್ಟಿದ್ದ ರೈತರಿಗೆ ಭಾರಿ ನಿರಾಸೆ ಮೂಡಿಸಿತು. ಮುಂಜಾನೆಯಿಂದಲೇ ಅನ್ನನಿರು ಇಲ್ಲದೆ ಸರತಿ ಸಾಲಿನಲ್ಲಿ ನಿಂತು ಬರಿಗೈಯಲ್ಲಿ ವಾಪಸಾಗುವಾಗ ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಹಳ್ಳಿಗಳಿಂದ ಕೆಲಸ ಕಾರ್ಯ ಬಿಟ್ಟು ಬಂದು ಗಂಟೆಗಟ್ಟಲೆ ಕ್ಯೂ ನಿಂತರೂ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು.
ಏ.26ರಂದು ಸಹ ಎಂದಿನಂತೆ ಸರತಿ ಸಾಲಿನಲ್ಲಿ ನಿಂತರು. ಅದೃಷ್ಟವಶಾತ್ ಮಧ್ಯಾಹ್ನದ ನಂತರ ನೋಂದಣಿ ಆರಂಭವಾಯಿತು. ನೂಕುನುಗ್ಗಲಿನಲ್ಲಿ ನೋಂದಣಿ ಮಾಡಿಸಿ ನಿಟ್ಟುಸಿರು ಬಿಟ್ಟ ರೈತರು ಮರುದಿನ ಅಂದರೆ ಏ.27ರಂದು ರಾಗಿ ಕೇಂದ್ರದ ಬಳಿ ಬಂದು ಠಿಕಾಣಿ ಹೂಡಿದರು. ಸಂಜೆಯವರೆಗೆ ನಿರಾತಂಕವಾಗಿ ನೋಂದಣಿ ನಡೆಯಿತು. ಆದರೆ ಸಂಜೆ ನೋಂದಣಿ ಸ್ಥಗಿತಗೊಂಡಿತು. ಗುರುವಾರ ಬೆಳಗ್ಗೆ ಪುನರಾರಂಭಗೊಳ್ಳಬಹುದೆಂಬ ಆಶಾಭಾವನೆಯಿಂದ ಹಿಂದಿರುಗಿದ ರೈತರಿಗೆ ಭಾರಿ ನಿರಾಸೆ ಮೂಡಿಸಿದೆ. ಪೂರ್ವ ನಿಗದಿಯಂತೆ 1.14 ಮೆಟ್ರಿಕ್ ಟನ್ನಷ್ಟು ಖರೀದಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವೆಬ್ಸೈಟ್ ಲಾಕ್ ಮಾಡಲಾಗಿದೆ. ಇದು ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಇನ್ನೂ ಸಾವಿರಾರು ಸಣ್ಣ ಹಿಡುವಳಿದಾರ ರೈತರಿಂದ ರಾಗಿ ಖರೀದಿಸಿಲ್ಲ. ಅದರಲ್ಲೂ ಮೊದಲ ಮತ್ತು ಎರಡನೇ ಹಂತದ ರಾಗಿ ನೊಂದಣಿಗೆ ಬಂದಿದ್ದರೂ ನೊಂದಣಿಯಾಗದೆ ಹಿಂದಿರುಗಿದ ರೈತರಿದ್ದಾರೆ. ಅಲ್ಲದೆ ದೊಡ್ಡ ಹಿಡುವಳಿದಾರರ ಮನೆಗಳಲ್ಲಿ ನೂರಾರು ಚೀಲ ರಾಗಿ ದಾಸ್ತಾನಿದ್ದು ರೈತನ ಸಂಕಷ್ಟಕ್ಕೆ ನೆರವಾಗಬೇಕಾದ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ರೈತ ಸಮುದಾಯ ಆರೋಪಿಸುತ್ತಿದೆ.
ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಕುಸಿತವಾದಾಗ ರೈತರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಎಲ್ಲ ರೈತರ ರಾಗಿ ಖರೀದಿಸದೆ ಗರಿಷ್ಠ ಮಿತಿ ನಿಗದಿ ಮಾಡಿ ರೈತ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ. ಕಳೆದ ವರ್ಷ 21 ಲಕ್ಷ ಕ್ವಿಂಟಾಲ್ ಈಗ 15 ಲಕ್ಷ ಕ್ವಿಂಟಾಲ್ ನಿಗದಿ ಮಾಡಿದೆ. ಅದರಲ್ಲೂ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಾಲ್ ಮಿತಿ ವಿಧಿಸಿದೆ. ರಾಜ್ಯದಲ್ಲಿ ಇನ್ನೂ ಸಾವಿರಾರು ರೈತರು ರಾಗಿ ಮಾರಿಲ್ಲ. ಸರ್ಕಾರ ನೊಂದಣಿ ಕಾರ್ಯವನ್ನು ಪುನ@ ಆರಂಭಿಸಬೇಕು. > ಕೆಂಕೆರೆ ಸತೀಶ್, ರಾಜ್ಯ ಉಪಾಧ್ಯಕ್ಷರು, ರೈತ ಸಂ