

ತುಮಕೂರು: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿ ಮತ್ತೆ ಆರಂಭವಾಗಿದ್ದರೂ ಸೋಮವಾರ ಜಿಲ್ಲೆಯ ಎಂಟೂ ಕೇಂದ್ರಗಳಲ್ಲಿ ನೋಂದಣಿಯಾಗದೆ ರೈತರು ಪರದಾಡಿದರು.
ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಹುಳಿಯಾರು, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಮಧುಗಿರಿ ಎಪಿಎಂಸಿ ಪ್ರಾಂಗಣಗಳಲ್ಲಿ ಜಮಾಯಿಸಿದ್ದ ಸಾವಿರಾರು ರೈತರು ನೋಂದಣಿಯಾಗದೆ ಆಕ್ರೋಶ ಹೊರಹಾಕಿದರು.
ರಾಗಿ ಮಾರುವ ಆತುರದಲ್ಲಿರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ್ರೂಟ್ ನಂಬರ್ ಸಮೇತರಾಗಿ ಆಯಾ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಖರೀದಿ ಕೇಂದ್ರದ ಬಾಗಿಲು ಕೂಡ ತೆರೆಯದೇ ರೈತರಿಗೆ ಮಾಹಿತಿ ನೀಡದೆ ಸಿಬ್ಬಂದಿ ಕಾಣೆಯಾಗಿದ್ದರು.
ಸರ್ಕಾರ ಈ ಹಿಂದಿನ ಮಾರ್ಗಸೂಚಿಯಂತೆ 4 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಗೆ ಮುಂದಾಗಿರುವುದು ಶೇ.60 ರೈತರನ್ನು ಕಂಗಾಲಾಗಿಸಿದ್ದು, ಆತಂಕದಿಂದಲೇ ಖರದೀ ಕೇಂದ್ರದ ಮುಂಭಾಗ ಅಳಲು ತೋಡಿಕೊಂಡರು.
ರಾಜ್ಯದಲ್ಲಿ 1.14ಲಕ್ಷ ಮೆ.ಟನ್ ರಾಗಿ ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು, 1.14ಲಕ್ಷ ಮೆ.ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಆತಂಕದಿಂದ ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ರೈತರು ನೋಂದಣಿಗೆ ಮುಗಿಬಿದ್ದಿದ್ದಾರೆ.
ಎಪಿಎಂಸಿ ಸಿಬ್ಬಂದಿ ತಮಗೆ ಬೇಕಾದವರಿಗೆ ರಾತ್ರೋರಾತ್ರಿ ನೋಂದಣಿ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳೂ ಇದ್ದು ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಜಿಲ್ಲೆಯಲ್ಲೆಡೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬಿಸಿಲಿನಲ್ಲಿ ಬಳಲಿದ ಅನ್ನದಾತರು: ಸೋಮವಾರ ನೋಂದಣಿ ಆರಂಭವಾಗಲಿದೆ ಎಂಬ ೂಷಣೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ರೈತರು ಎಪಿಎಂಸಿ ಆವರಣದಲ್ಲಿ ಜಮಾಯಿಸತೊಡಗಿದರು. ಬೆಳಗ್ಗೆ 9ರ ವೇಳೆಗೆ ಸಾವಿರಾರು ರೈತರು ಸರತಿಯಲ್ಲಿ ನಿಂತಿದ್ದರು. ಆದರೆ, ತಾಂತ್ರಿಕ ಸಮಸ್ಯೆಯ ನೆಪಮಾಡಿಕೊಂಡು ಎಪಿಎಂಸಿ ಸಿಬ್ಬಂದಿ ಕಚೇರಿ ತೆರೆಯುವ ಗೋಜಿಗೆ ಹೋಗಲಿಲ್ಲ, ತಿಂಡಿ, ನೀರು, ಊಟವೂ ಇಲ್ಲದೆ ಬಿಸಿಲಿನಲ್ಲಿ ಬಳಲಿದ ರೈತರನ್ನು ಎಪಿಎಂಸಿ ಅಧಿಕಾರಿಗಳು ಮರೆತಿದ್ದರು. ತಿಪಟೂರು, ಹುಳಿಯಾರು, ಕುಣಿಗಲ್ ಮತ್ತಿತರರ ಕಡೆಗಳಲ್ಲಿ ಪ್ರತಿಭಟನೆ ಕೂಡ ನಡೆದಿರುವ ಬಗ್ಗೆ ವರದಿಯಾಗಿದೆ.
ತಾಂತ್ರಿಕ ತೊಂದರೆಯಿಂದ ಸೋಮವಾರ ಆರಂಭವಾಗಬೇಕಿದ್ದು, ರೈತರ ನೋಂದಣಿ ತಡವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು ಸಮಸ್ಯೆ ಪರಿಹಾರವಾಗಲಿದೆ. ಮಂಗಳವಾರದಿಂದ ರೈತರು ನೋಂದಣಿ ಮಾಡಿಕೊಂಡು ರಾಗಿ ಮಾರಲು ಅವಕಾಶವಿದೆ. > ಶ್ರೀನಿವಾಸಯ್ಯ ಜಂಟಿ ನಿರ್ದೇಶಕ, ಆಹಾರ ಇಲಾಖೆ.
ಚಿಕ್ಕನಾಯಕನಹಳ್ಳಿಯಲ್ಲೂ ಖರೀದಿಯಾಗದ ರಾಗಿ: ರಾಗಿ ಖರೀದಿ ಕೇಂದ್ರದ ಮುಂಭಾಗ ನೋಂದಣಿಗಾಗಿ ಸಾಲುಗಟ್ಟಿ ನಿಂತರೂ ಖರೀದಿಗೆ ನೋಂದಣಿಯಾಗದೆ ರೈತರು ಅಸಮಾಧಾನಗೊಂಡು ವಾಪಾಸ್ ತೆರಳಿದರು.
ಚಿಕ್ಕನಾಯಕನಹಳ್ಳಿಯ ಕೃಷಿ ಉತ್ಪನ್ನ ಉಪಮಾರುಕಟ್ಟೆ ಕೇಂದ್ರದಲ್ಲಿ ರಾಗಿ ಖರೀದಿಗೆ ಸೋಮವಾರ ದಿನಾಂಕ ನಿಗದಿಪಡಿಸಿದ್ದು, ತಾಂತ್ರಿಕ ವ್ಯವಸ್ಥೆ ಮಾಡದೆ ಬೆಳಗ್ಗಿನಿಂದ ಸರ್ವರ್ ಸಮಸ್ಯೆ ಇದೆ ಎನ್ನುತ್ತಿದ್ದ ಅಧಿಕಾರಿಗಳು, ಮೇಲಾಧಿಕಾರಿಗಳು ಸರ್ವರ್ ಸರಿಪಡಿಸುವವರೆಗೆ ನೋಂದಣಿ ಸಾಧ್ಯವಿಲ್ಲ ಎಂದು ಕೈಚೆಲ್ಲಿದರು.
ಕಾರೇಹಳ್ಳಿಯ ರೈತ ರೇಣುಕಯ್ಯ ಮಾತನಾಡಿ, ನಾಲ್ಕು ಎಕೆರೆ ಜಮೀನಿನಲ್ಲಿ ಒಟ್ಟು 30ಕ್ವಿಂಟಾಲ್ ರಾಗಿ ಬೆಳೆದಿದ್ದು ಕಳೆದ ಬಾರಿ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿಯಾದರೂ ಮಾರಾಟ ಮಾಡಲು ಬಂದರೆ ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಾರೆ ಎಂದರು.
ಹೊನ್ನೇಬಾಗಿಯ ಕೃಷ್ಣಯ್ಯ, ಕಂದಿಕೆರೆಯ ಲಿಂಗರಾಜು ಒಂದುವರೆ ಎಕರೆ ಜಮೀನಿನಲ್ಲಿ ತಲಾ ಹತ್ತು ಕ್ವಿಂಟಾರ್ ರಾಗಿ ಬೆಳೆದಿದ್ದು, ಅದನ್ನು ಮಾರಾಟ ಮಾಡಲು ಬಂದಿದ್ದರು. ಅದರೆ ಅಧಿಕಾರಿಗಳು ದಿನಾಂಕ ೂಷಿಸಿದ್ದು, ಖರೀದಿಗೆ ಸರಿಯಾದ ತಾಂತ್ರಿಕ ವ್ಯವಸ್ಥೆ ಮಾಡಿರಲಿಲ್ಲ. ಹಂದನಕೆರೆ, ಕಂದಿಕೆರೆ, ಕಸಬಾ, ಶೆಟ್ಟಿಕೆರೆ ಹೋಬಳಿಗಳ ರೈತರು ಬೆಳಗ್ಗಿನಿಂದಲೇ ನೋಂದಣಿ ಮಾಡಿಸಲು ಸರತಿಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.
ನಾನು ನಾಲ್ಕುವರೆ ಎಕರೆ ಜಮೀನಿನಲ್ಲಿ ಒಟ್ಟು 35ಕ್ವಿಂಟಾಲ್ ರಾಗಿ ಬೆಳೆದಿದ್ದು, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಇಲ್ಲದೇ ಪರದಾಡುವಂತಾಗುತ್ತಿದೆ. ಕನಿಷ್ಠ ಒಂದು ಮಾರುಕಟ್ಟೆಯಲ್ಲಿ ಇಂತಿಷ್ಟು ಖರೀದಿ ಮಾಡಲಾಗುವುದು ಎಂದು ತಿಳಿಸದೆ ರಾಜ್ಯದ ಒಟ್ಟು ಖರೀದಿ ಯಾವಾಗ ಮುಗಿಯುತ್ತದೆಯೊ ಅವಾಗ ನಿಲ್ಲಿಸಲಾಗುವುದು ಎಂದು ತಿಳಿಸಿದ್ದು ಇಂದು ಪ್ರಾರಂಭವಾಗಬೇಕಿತ್ತು. ನೋಂದಣಿ ಆಗಿಲ್ಲ. ಇದರಿಂದ ರೈತರು ಅಲೆದಾಡುವಂತಹ ಸ್ಥಿತಿ ಇದೆ. > ಭಾರತೀಶ್, ರೈತ ಬಂಗಾರಗೆರೆ
ಶಾಸಕರ ಕೈ ಬರವಣಿಗೆಯಿಂದ ನೋಂದಣಿ: ತಾಂತ್ರಿಕದೋಷ ಮುಂದಿಟ್ಟಿಕೊಂಡು ರಾಗಿ ಖರೀದಿಗೆ ರೈತರ ಹೆಸರು ನೋಂದಣಿ ಮಾಡಿಕೊಳ್ಳಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಕುಣಿಗಲ್ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಎಪಿಎಂಸಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ನೋಂದಣಿಗಾಗಿ ವಿವಿಧ ಗ್ರಾಮಗಳ ನೂರಾರು ರೈತರು ಎಪಿಎಂಸಿ ರಾಗಿ ಖರೀದಿ ಕೇಂದ್ರ ಬಳಿ ಜಮಾಯಿಸಿದ್ದರು. ತಾಂತ್ರಿಕ ದೋಷವಾದ್ದು, ನೋಂದಣಿ ಆಗಲ್ಲ ಎನ್ನುತ್ತಿದ್ದಂತೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು,
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಊಟ ತಿಂಡಿ ಹಾಗೂ ಕುಡಿಯಲು ನೀರಿಲ್ಲದೆ ತೀವ್ರ ಬಸವಳಿದಿದ್ದ ರೈತರಿಗೆ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು.
ಸಮಸ್ಯೆ ಅರಿತ ಶಾಸಕ ಡಾ.ಎಚ್.ಡಿ.ರಂಗನಾಥ್ ಎಪಿಎಂಸಿಗೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿದರು. ಅಲ್ಲದೆ ತಾಂತ್ರಿಕದೋಷ ಸರಿ ಪಡಿಸುವವರೆಗೂ ಕೈಯಿಂದಲ್ಲೇ ರೈತರ ಹೆಸರು ನೋಂದಾಯಿಸಿಕೊಳ್ಳುವಂತೆ ತಹಸೀಲ್ದಾರ್ ಮಹಬಲೇಶ್ವರ ಹಾಗೂ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು, ಸ್ವತ@ ಶಾಸಕರೇ ಕೈ ಬರವಣಿಗೆಯಿಂದ 500 ಮಂದಿ ರೈತರ ಹೆಸರು ನೋಂದಾಯಿಸಿಕೊಂಡರು. ಇದರಿಂದ ರೈತರು ಪ್ರತಿಭಟನೆ ಕೈ ಬಿಟ್ಟರು.