ರಾಗಿ ಖರೀದಿ ಅವಧಿ ವಿಸ್ತರಣೆಗೆ ಸಚಿವರಿಗೆ ಪತ್ರ ಬರೆದಿರುವುದಾಗಿ ಶಾಸಕ ಮಂಜು ಹೇಳಿಕೆ

11-01-rama-bidadi
Published on

ರಾಮನಗರ :  ರಾಗಿ ಖರೀದಿಗೆ ಸರ್ಕಾರ ಮುಂದಾಗಿದ್ದು, ್ರೂಟ್ ತಂತ್ರಾಂಶದ ದೋಷಗಳಿಂದ ರೈತರಿಗೆ ತೊಂದರೆಯಾಗಿತ್ತಿರುವ ಬಗ್ಗೆ ಕಂದಾಯ ಸಚಿವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.

ಮಾಗಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಡದಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಅಂದಾಜು 2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 3250 ರೂ.ಗೆ ಖರೀದಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಬೆಲೆಯೂ ಸಿಕ್ಕಂತೆ ಆಗುತ್ತದೆ. ಆದರೆ ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ದಾಖಲಿಸದೇ ಇರುವುದರಿಂದ ರೈತರು ತೊಂದರೆಗೆ ಒಳಗಾಗುವಂತೆ ಆಗಿದೆ. ರಾಗಿ ಖರೀದಿಗೆ ಬಳಕೆ ಮಾಡಲಾಗುತ್ತಿರುವ ್ರೂಟ್ ತಂತ್ರಾಂಶದಲ್ಲಿ ಸರಿಯಾದ ಮಾಹಿತಿ ದಾಖಲು ಮಾಡಲು ಆಗುತ್ತಿಲ್ಲ. ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು.

ತಂತ್ರಾಂಶದ ಸಮಸ್ಯೆಯಿಂದಾಗಿ ರೈತರು ತೊಂದರೆಗೆ ಒಳಗಾಗುವಂತೆ ಆಗಿದ್ದು, ರಾಗಿ ಖರೀದಿಗೆ ನಿಗದಿಯಾಗಿರುವ ಸಮಯ ವಿಸ್ತರಣೆ ಮಾಡಬೇಕು ಹಾಗೂ ಕೂಡಲೇ ದೋಷಪೂರಿತವಾಗಿರುವ ತಂತ್ರಾಂಶ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಿದ್ದ ಅನುದಾನದಲ್ಲಿ ಕೈಗೊಂಡಿದ್ದ ಬಹುತೇಕ ಕಾಮಗಾರಿಗಳು ಮುಗಿದಿದ್ದು, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಅಗತ್ಯ ಕೆಲಸ ಕೈಗೊಳ್ಳಲಾಗಿದೆ. ಉರಗಹಳ್ಳಿ ಎಸ್‌ಸಿ ಕಾಲನಿ ಸಿಸಿ ರಸ್ತೆ, ಚರಂಡಿ ಕಾಮಗಾರಿ, ನಿಂಗಯ್ಯನ ಕೆರೆ ಕೋಡಿ ರಸ್ತೆಯಿಂದ ಬುಡ್ಡ ಭೋವಿದೊಡ್ಡಿ ಸಂಪರ್ಕ ರಸ್ತೆ ಕಾಮಗಾರಿ, ದೊಡ್ಡ ಮುದವಾಡಿ ರಸ್ತೆಯಿಂದ ಕೇತೋಹಳ್ಳಿ ರಸ್ತೆ ಅಭಿವೃದ್ಧಿ,

ಮಹದೇವಪುರ ಎಸ್‌ಸಿ ಕಾಲನಿ ಸಿಸಿ ರಸ್ತೆ, ಶೇಷಗಿರಿಹಳ್ಳಿ, ಮುತ್ತರಾಯನಪುರ, ವಾಜರಹಳ್ಳಿ ಸಿಸಿ ರಸ್ತೆ ಅಭಿವೃದ್ಧಿ, ಕಾಕರಾಮನಹಳ್ಳಿ ಹಿರೇಹಳ್ಳಿ ಮೂಲಕ ಬೈರಾಗಿ ಕಾಲನಿಯಿಂದ ಬಿ.ಎಂ.ರಸ್ತೆವರೆಗೆ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಜೆಡಿಎಸ್ ಮುಖಂಡರಾದ ಸೋಮೇಗೌಡ, ರಾಮಕೃಷ್ಣಯ್ಯ, ಮಂಜುನಾಥ್, ಗೋಪಾಲ್, ಉಮಾಶಂಕರ್, ನರಸಿಂಹಯ್ಯ, ಇಟ್ಟಮಡು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಧನಂಜಯ, ಲೊಕೋಪಯೋಗಿ ಇಲಾಖೆ ಅಧಿಕಾರಿಗಳಾದ ಕೆ.ಎಚ್.ಶಂಕರ್, ಶ್ರೀನಿವಾಸ್, ಗೋಪಾಲಕೃಷ್ಣ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net