ರಾಗಿ ಕಟಾವಿಗೆ ಮಳೆ ಅಡ್ಡಿ

20201019_162356
Published on

ಬೂದಿಕೋಟೆ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಗಿ ಕಟಾವು ಮಾಡಲು ರೈತರು ಪರದಾಡುವಂತಾಗಿದ್ದು, ತೆನೆ ನೆನೆದು ಮೊಳಕೆ ಬರುವ ಸ್ಥಿತಿ ಉಂಟಾಗಿದೆ.

ಬಂಗಾರಪೇಟೆ ತಾಲೂಕಿನಲ್ಲಿ ಈ ಬಾರಿ 9,053 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿದೆ. ಆದರೆ, ಇತ್ತೀಚೆಗೆ ಸುರಿದ ಮಳೆಗೆ ರಾಗಿ ಬೆಳೆ ನೆಲಕ್ಕೆ ಉರುಳಿದ್ದು, ಕಟಾವು ಹಂತದಲ್ಲಿರುವ ರಾಗಿ ತೆನೆ ಮಳೆಗೆ ನೆನೆದು ಮೊಳಕೆ ಬರುವ ಆತಂಕ ಎದುರಾಗಿದೆ

ಮೂರ‌್ನಾಲ್ಕು ದಿನಗಳಿಂದ ಜಡಿ ಮಳೆಯಾಗುತ್ತಿರುವ ಕಾರಣ ರಾಗಿ ತೆನೆಯನ್ನು ಕೊಯ್ಲು ವಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಮೊದಲ ಹಂತದಲ್ಲಿ ಬಿತ್ತನೆ ವಾಡಲಾಗಿದ್ದ ತೆನೆ ಮಳೆಗೆ ನೆನೆದು ಬಿಸಿಲು ಇಲ್ಲದೆ ತಿನ್ನಲು ಯೋಗ್ಯವಲ್ಲದಂತಾಗುತ್ತದೆ ಎಂಬ ಭೀತಿ ರೈತರಲ್ಲಿ ಉಂಟಾಗಿದೆ.

ಮೂರು ಹಂತದಲ್ಲಿ ಬಿತ್ತನೆ: ಈ ಬಾರಿ ರೈತರು ಮೂರು ಹಂತದಲ್ಲಿ ರಾಗಿ ಬಿತ್ತನೆ ವಾಡಿದ್ದು, ಮೊದಲ ಹಂತದಲ್ಲಿ ಬಿತ್ತನೆ ವಾಡಿದ್ದ ರಾಗಿ ಕಟಾವಿಗೆ ಬಂದಿದೆ. ಎರಡನೇ ಹಂತದ ಬೆಳೆ ತೆನೆಯಲ್ಲಿ ಕಾಳು ತುಂಬುತ್ತಿದ್ದು, ಮೂರನೇ ಹಂತದ ಬೆಳೆ ಈಗ ಕಾಳು ಕಟ್ಟುವ ಹಂತದಲ್ಲಿದೆ. ಎಲ್ಲ ಹಂತಗಳಲ್ಲೂ ಬಿತ್ತನೆ ವಾಡಿರುವ ಬೆಳೆ ಮಳೆಯಿಂದಾಗಿ ನೆಲಕ್ಕೆ ಉರುಳಿದ್ದು, ಕಷ್ಟ ಪಟ್ಟು ಬೆಳೆದ ಬೆಳೆ ಕೈಗೆ ಸೇರದಂತಾಗಿದೆ

ನೆಲಕಚ್ಚಿರುವ ರಾಗಿ ತೆನೆ ಮೊಳಕೆ ಬರವ ಆತಂಕ ಒಂದು ಕಡೆಯಾದರೆ, ಮತ್ತೊಂದೆಡೆ ತೆನೆಯನ್ನು ಕೊಯ್ಲು ವಾಡಲು ಮಳೆ ಅಡ್ಡಿಯಾಗಿದೆ. ಮಳೆರಾಯನ ಆಟದಿಂದ ಕಷ್ಟಪಟ್ಟು ಬೆಳೆದ ಬೆಳೆ ಮನೆ ಸೇರುವ ಗ್ಯಾರಂಟಿ ಇಲ್ಲದಂತಾಗಿದೆ. ಶಿವಪ್ಪ, ರೈತ, ಬೊಮ್ಮಗಾನಹಳ್ಳಿ ತಾಲೂಕಿನಲ್ಲಿ ಶೇ.10 ಬಿತ್ತನೆ ಮೊದಲ ಹಂತದಲ್ಲಿ ಮುಗಿಸಲಾಗಿತ್ತು, ಮಳೆಯಿಂದ ಕಟಾವು ಸಾಧ್ಯವಾಗುತ್ತಿಲ್ಲ. ಎರಡನೇ ಹಂತದ ಬೆಳೆ ದೀಪಾವಳಿ ಸಮಯದಲ್ಲಿ ಕಟಾವಿಗೆ ಬರಲಿದ್ದು, ಆ ಸಮಯದಲ್ಲಿ ಸಾವಾನ್ಯವಾಗಿ ಜಡಿ ಮಳೆಯಾಗುತ್ತದೆ. ಇದರಿಂದ ಮತ್ತೆ ರೈತರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಬಿ.ವಿ. ವಿಜಯಕುವಾರ್, ಕೃಷಿ ಅಧಿಕಾರಿ ಬೂದಿಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net