ರಾಖಿ ಕಟ್ಟಿ ಸಂಭ್ರಮಿಸಿದ ಶಾಸಕಿ ಲಕ್ಷ್ಮೀ

22Jaggu4_Web
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ನಿವಾಸಕ್ಕೆ ಆಗಮಿಸಿದ ಗ್ರಾಮೀಣ ಕ್ಷೇತ್ರದ ಜನರಿಗೆ ರಾಖಿ ಕಟ್ಟಿದರು. ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್, ಡಾ. ಹಿತಾ, ಯುವರಾಜ ಕದಂ, ಅಡಿವೇಶ ಇಟಗಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಮ್ಯಾಗೋಟಿ ಇತರರಿದ್ದರು.
Published on

ಬೆಳಗಾವಿ: ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಸಂಭ್ರಮದಿಂದ ಆಚರಿಸಿದರು. ಕ್ಷೇತ್ರದ ಜನರು ಆಗಮಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ರಾಖಿ ಕಟ್ಟಿಸಿಕೊಂಡು, ಸಿಹಿ ತಿಂದು ಖುಷಿಪಟ್ಟರು.

ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ತಿಲಕವಿಟ್ಟು, ರಾಖಿ ಕಟ್ಟಿ ಆರತಿ ಬೆಳಗಿದ ಹೆಬ್ಬಾಳ್ಕರ್, ಮನೆಗೆ ಆಗಮಿಸಿದ ಕ್ಷೇತ್ರದ ಜನರಿಗೆ ರಾಖಿ ಕಟ್ಟಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಜನರು ಆಗಮಿಸಿ ರಾಖಿ ಕಟ್ಟಿಸಿಕೊಂಡರು. ಈ ವೇಳೆ ಜನರಿಗಾಗಿ ಅಲ್ಪೋಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಶಾಸಕಿ ಲಕ್ಷ್ಮೀ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರೆ, ಕಿರಿಯರು ಹೆಬ್ಬಾಳ್ಕರ್ ಅವರ ಕಾಲಿಗೆ ನಮಸ್ಕರಿಸುತ್ತಿದ್ದರು.

ಈ ವೇಳೆ ಶಾಸಕಿ ಲಕ್ಷ್ಮೀ ಮಾತನಾಡಿ, ಪ್ರತಿವರ್ಷ ರಾಖಿ ಕಟ್ಟುವ ಸಂಪ್ರದಾಯವನ್ನು ನಡೆಸಿಕೊಡು ಬರುತ್ತಿದ್ದೆ. ಆದರೆ, ಕಳೆದ 2 ವರ್ಷದಿಂದ ಕರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ರಾಖಿ ಕಟ್ಟುವ ಸಂಪ್ರದಾಯ ಬಿಡಬೇಕು ಅಂದುಕೊಂಡಿದ್ದೆ. ಆದರೆ, ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದಿಂದಾಗಿ ಸಂಪ್ರದಾಯ ನಿಲ್ಲಿಸಲು ಸಾಧ್ಯವಾಗಲಿಲ್ಲ. ಜನರು ತಾವಾಗಿಯೇ ಆಗಮಿಸಿ ಅಪಾರ ಪ್ರೀತಿ ತೋರಿಸುತ್ತಿದ್ದಾರೆ ಎಂದರು.

ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್, ಡಾ. ಹಿತಾ, ಹೆಬ್ಬಾಳ್ಕರ್ ಕುಟುಂಬಸ್ಥರು, ಗಣ್ಯರಾದ ಯುವರಾಜ ಕದಂ, ಅಡಿವೇಶ ಇಟಗಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಮ್ಯಾಗೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net