ರಾಂ ಸನ್ಮಾರ್ಗದಲ್ಲಿ ಸಾಗುವುದು ವಿಹಿತ

05 Raju 6
Published on

ಚಾಮರಾಜನಗರ: ಆಲೋಚನಾ ಶಕ್ತಿ ಇರುವ ಮಾನವರು ಸದಾ ಸನ್ಮಾರ್ಗದಲ್ಲೇ ಸಾಗುವುದು ವಿಹಿತ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಭಾನುವಾರ ಅಂಕ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಂತ ಮನುಷ್ಯನಿಗೆ ಆಲೋಚನೆ ಮಾಡುವ ಶಕ್ತಿ ಕೊಟ್ಟಿದ್ದಾನೆ. ಪ್ರಾಣಿ, ಪಕ್ಷಿಗಳ ಆಹಾರ ಕ್ರಮ ಜಗದ ನಿಯಮಾನುಸಾರ ನಡೆಯುತ್ತಿದೆ ಎಂದರು.
ಯಾವ ಮನುಷ್ಯ ಧರ್ಮವನ್ನು ಪಾಲನೆ ಮಾಡುತ್ತಾನೋ ಅಂಥವರನ್ನು ಧರ್ಮವೇ ರಕ್ಷಿಸುತ್ತದೆ. ಜಗಜ್ಯೋತಿ ಬಸವಣ್ಣ ಹೇಳಿದಂತೆ ದಯವೇ ಧರ್ಮದ ಮೂಲವಾಗಿದೆ. ಆದ್ದರಿಂದ ಇತರರಿಗೆ ಒಳಿತನ್ನೇ ಯಾವಾಗಲೂ ಬಯಸಬೇಕು ಎಂದರು.
ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಒಂದೊಂದು ದೇಶವೂ ತನ್ನದೇ ಆದ ರೀತಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಭಾರತ ವಿಶೇಷವಾದ ಆಧ್ಯಾತ್ಮಿಕ ಶಕ್ತಿಯಿಂದ ವಿಶ್ವಗುರುವಾಗಿದೆ ಎಂದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ಎಲ್ಲಿಯವರೆಗೆ ಚೆನ್ನಾಗಿರುತ್ತದೆಯೋ ಅಲ್ಲಿಯವರೆಗೆ ಇಡೀ ಜಗತ್ತು ಚೆನ್ನಾಗಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net