ರಸ್ತೆಯಲ್ಲಿ ನೀರು ಸಂಚಾರಕ್ಕೆ ಸಂಚಕಾರ

ydg2
ಯಾಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿಯ ಮುಖ್ಯ ರಸ್ತೆಯಲ್ಲಿನ ತಗ್ಗುಗಲ್ಲಿ ನಿಂತಿರುವ ಮಳೆ ನೀರಲ್ಲಿಯೇ ಸಾಹಸ ಮಾಡುತ್ತಲೇ ವಾಹನ ಚಲಾಯಿಸುತ್ತಿರುವುದು.
Published on

ಯಾದಗಿರಿ: ನೀವೇನಾದರೂ ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ. ಇದೇನು ರಸ್ತೆಯೋ ? ಅಥವಾ ಹಳ್ಳವೋ? ಎಂಬ ಗೊಂದಲ ನಿಮ್ಮನ್ನು ಕಾಡದೆ ಇರದು. ಇಂತಹ ಅನುಭವ ಆಗಬೇಕು ಅಂದರೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿಯ ಮುಖ್ಯರಸ್ತೆಯಲ್ಲಿ ವಾಹನ ಓಡಿಸಿದರೆ ಸಾಕು.

ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಸಳ್ಳಿ ಕ್ರಾಸ್ ಬಳಿ ಮುಖ್ಯ ರಸ್ತೆಯಲ್ಲಿ ತಗ್ಗುಗಳು ಬಿದ್ದು ಅದರಲ್ಲಿ ನಿಂತ ನೀರಿನಿಂದ ಸಣ್ಣ ಹಳ್ಳವೇ ನಿರ್ಮಾಣಗೊಂಡಿದೆ. ಪಾದಚಾರಿಗಳು, ವಾಹನ ಸವಾರರು, ಮಕ್ಕಳು, ವಯೋವೃದ್ಧರು ಈ ರಸ್ತೆಯಲ್ಲಿ ಹೋಗಿ ಬರಲು ಹೆದರುವಂತಾಗಿದೆ. ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಈ ರಸ್ತೆಯಲ್ಲಿ ಸಂಚಾರ ಮಾಡಿದರೆ ಜೀವಕ್ಕೆ ಸಂಚಕಾರ ತಂದುಕೊAಡAತೆ ಆಗುತ್ತಿದೆ. ಆದರೆ, ನಗರಸಭೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾತ್ರ ನಿರುಮ್ಮಳವಾಗಿದ್ದಾರೆ. ಅದನ್ನು ದುರಸ್ತಿಗೊಳಿಸುವ ಗೋಜಿಗೂ ಹೋಗದಿರುವುದು ಸೋಜಿಗವಾಗಿದೆ.

ಮೊದಲೇ ರಸ್ತೆ ಸರಿ ಇಲ್ಲದ ಈ ಪ್ರದೇಶದಲ್ಲಿನ ತಗ್ಗುಗಳಲ್ಲಿ ಮಕ್ಕಳು ಮುಳುಗುವಷ್ಟು ನೀರು ನಿಲ್ಲುತ್ತಿದೆ.ಆದರೂ, ಅದನ್ನು ಸರಿಪಡಿಸುವ ಕಾಳಜಿ ನಗರಸಭೆಯವರು ಮಾಡುತ್ತಿಲ್ಲ.ಬಡಾವಣೆಯ ನಿವಾಸಿಗಳು, ಸಾರ್ವಜನಿಕರು ನಗರಸಭೆಯವರಿಗೆ, ಜನಪ್ರತಿನಿಧಿಗಳಿಗೆ ನಿತ್ಯ ಶಾಪ ಹಾಕುತ್ತಲೇ ಸಂಚರಿಸುತ್ತಿದ್ದಾರೆ. ಈಗಲಾದರೂ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಿ ದುರಸ್ತಿಗೆ ಮುಂದಾಗಬೇಕು ಎಂಬುದು ಜನರು ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net