

ಚಿತ್ರದುರ್ಗ: ನಗರದ ಆರ್‌ಟಿಒ ಕಚೇರಿ ರಾ.ಹೆ.48ರ ಸರ್ವಿಸ್ ರಸ್ತೆಯಲ್ಲಿ ಶೀತ,ಕೆಮ್ಮ ಮತ್ತು ಅಲರ್ಜಿಗೆ ಕೊಡುವಂತಹ ಸಾವಿರಾರು ರೂ. ಮೌಲ್ಯದ್ದೆಂದು ಅಂದಾಜಿಸಿರುವ ಸಿಟ್ರಿಜನ್ ಟ್ಯಾಬ್ಲೆಟ್‌ಗಳನ್ನು ಬಿಸಾಡಿರುವುದು ಮಂಗಳವಾರ ಪತ್ತೆಯಾಗಿದೆ. ಬಡವರ ಆರೋಗ್ಯಕ್ಕಾಗಿ ಸ ರ್ಕಾರ ಖರೀದಿಸಿರುವ ಅವಧಿ ಮೀರದ ಮಾತ್ರೆಗಳನ್ನು ಯಾಕಾಗಿ ರಸ್ತೆಯಲ್ಲಿ ಎಸೆಯಲಾಗಿದೆ ಎಂಬ ಪ್ರಶ್ನೆ ಎದುರಾಗಿದೆ.
2024ವರೆಗೆ ಅವಧಿ ಇರುವ ಈ ಮಾತ್ರೆಗಳ ಶೀಟ್ ಮೇಲೆ ನಾಟ್‌ಫಾರ್ ಸೇಲ್ ಎಂದಿದೆ. ಸ್ಟಾಕ್ ಇದ್ದರೂ ಹೊಸ ಖರೀದಿಯ ಮೂ ಲಕ ಉತ್ಪಾದಕರು,ಅಥವಾ ಸರಬರಾಜು ಅನುಕೂಲಕ್ಕಾಗಿ ಹೀಗೆ ಮಾಡ ಲಾಗಿದೆಯೇ?ಅವಧಿ ಮೀರಿದ್ದರೆ ಅಂಥವುಗಳನ್ನು ನಿಯಮಾ ನುಸಾರ ಡಿಸ್‌ಪೋಸ್ ಮಾಡಬೇಕಾಗುತ್ತದೆ. ಬಿಸಾಡಿರುವ ಮಾತ್ರೆಗಳ ಮೌಲ್ಯ ವೆಷ್ಟು?
ಷಡ್ಯಂತ್ರ ಏನಾದರೂ ನಡೆದಿತ್ತೇ ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಮಾತ್ರೆಗಳು ಪತ್ತೆಯಾಗಿರುವುದರ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಚ್‌ಒ ಆರ್.ರಂಗನಾಥ್,ಅಲ್ಲಿ ದೊರಕಿರುವ ಬ್ಯಾಚ್‌ನಂ.ಮಾತ್ರೆಗಳು ನಮ್ಮ ಜಿಲ್ಲೆಗೆ 2022ರಿಂದ ಪೂರೈಕೆ ಆಗಿಲ್ಲ ವೆಂದು ಸ್ಪಷ್ಟಪಡಿಸಿದ್ದಾರೆ.