ರಸ್ತೆಗೆ ಅಡ್ಡ ಸಿಲುಕಿದ ಬಸ್

30 HANUR 6
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ಆನೆತಲೆ ದಿಂಬದ ತಿರುವಿನಲ್ಲಿ ಗುರುವಾರ ಪ್ರವಾಸಿ ಖಾಸಗಿ ಬಸ್ಸೊಂದು ರಸ್ತೆಗೆ ಅಡ್ಡ ಸಿಲುಕಿದ ಪರಿಣಾಮ ಒಂದು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತಯವಾಗಿತ್ತು. ಇದರಿಂದ ಮಾದಪ್ಪನ ಭಕ್ತರು ತೊಂದರೆ ಅನುಭವಿಸಿದರು.

ಬೆಳಗ್ಗೆ 10ರ ವೇಳೆಯಲ್ಲಿ ಅಂತಾರಾಜ್ಯಕ್ಕೆ ಸೇರಿದ ಖಾಸಗಿ ಪ್ರವಾಸಿ ಬಸ್ಸೊಂದು ಮ.ಬೆಟ್ಟದಿಂದ ಹನೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ಆನೆತಲೆ ದಿಂಬದ ತಿರುವಿನಲ್ಲಿ ಚಾಲಕ ಕಡಿದಾಗಿ ಚಾಲನೆ ಮಾಡಿದ ಪರಿಣಾಮ ಬಸ್‌ನ ಹಿಂಬಂದಿ ರಸ್ತೆಗೆ ಸಿಲುಕಿತು. ಇದರಿಂದ ಮುಂದೆ ಚಲಿಸಲಾಗದೇ ರಸ್ತೆಗೆ ಅಡ್ಡಲಾಗಿ ನಿಂತಿತು. ಕಾರು, ಬೈಕ್ ಮಾತ್ರವಷ್ಟೇ ಸಂಚರಿಸಲು ಸಾಧ್ಯವಾಯಿತು. ಆದರೆ ಬಸ್ ಹಾಗೂ ಇನ್ನಿತರ ವಾಹನಗಳು ಒಂದು ಗಂಟೆಗಲ ಕಾಲ ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಸಹಕಾರ ಪಡೆದು ರಸ್ತೆಗೆ ಸಿಲುಕಿದ್ದ ಬಸ್ ಅನ್ನು ಮುಂದೆ ಚಲಿಸುವಂತೆ ಮಾಡಿದರು. ಬಳಿಕ ವಾಹನ ಸವಾರರು ಹಾಗೂ ಭಕ್ತರು ನಿಟ್ಟುಸಿರು ಬಿಟ್ಟು ತೆರಳಿದರು. ಈ ಮೂಲಕ ಮಾದಪ್ಪನ ಭಕ್ತರು ಕಿರಿಕಿರಿಯ ಜತೆಗೆ ತೊಂದರೆಯನ್ನು ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net