ರಸ್ತೆಗಳ ಮೇಲೆ ಭಾರಿ ನೀರು

2907klb11
Published on


ಕಲಬುರಗಿ: ನಗರದ ಹಲವೆಡೆ ಬುಧವಾರ ಸುರಿದ ಮಳೆಯಿಂದಾಗಿ ವಿವಿಧ ಕಡೆ ರಸ್ತೆ ಮೇಲೆ ನೀರು ಹರಿದ ಕಾರಣ ಕೆಲ ಸಮಯ ಸಂಚಾರ
ಅಸ್ತವ್ಯಸವಾಗಿತ್ತು.
ಶಹಾಬಜಾರ, ಆಳಂದ ರಸ್ತೆಯಲ್ಲಿ ಬಿರುಸಿನ ಮಳೆಯಾಗಿದ್ದರಿಂದ ಲಾಲ್ಗೇರಿ ಕ್ರಾಸ್ ಹಾಗೂ ಸಿದ್ದಿ ಪಾಷಾ ದರ್ಗಾ ಬಳಿ ರಸ್ತೆ ಮೇಲೆ ನೀರು ಹರಿದ ಪರಿಣಾಮವಾಗಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸ್ವಲ್ಪ ಮಳೆ ಬಂದರೆ ಸಾಕು ಈ ಮಾರ್ಗದಲ್ಲಿ ನೀರು ಜಮಾಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶಹಾಬಜಾರ ಪ್ರದೇಶ ಎತ್ತರದಲ್ಲಿರುವುದರಿಂದ ಆ ಭಾಗದಲ್ಲಿ ಮಳೆಯಾದರೆ ಲಾಲ್ಗೇರಿ ಕ್ರಾಸ್ ಮತ್ತು ಸಿದ್ಧಿಪಾಷಾ ದಗರ್ಾ ಬಳಿ ನೀರು ಜಮಾಗೊಂಡು ಸಂಚಾರ ಸ್ಥಗಿತಗೊಳ್ಳುತ್ತದೆ.
ನೀರು ಹರಿದು ಹೋಗಲು ವ್ಯವಸ್ಥಿತ ಮಾರ್ಗವಿಲ್ಲದ ಕಾರಣ ಮಳೆ ನೀರು ರಸ್ತೆಯನ್ನು ಆವರಿಸುತ್ತದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಪ್ರತಿಸಲ ಮಳೆ ಬಂದಾಗ ಈ ಗೋಳು ಇದ್ದೇ ಇರುತ್ತದೆ. ಸಂಬಂಧಿತರು ನೀರು ಸುಗಮವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net