ರಸ್ತೆ ಸೌಕರ್ಯದಿಂದ ಪ್ರಯಾಣ ಸುಲಭ

30npn3
Published on

ನಿಪ್ಪಾಣಿ: ಪಟ್ಟಣದ ಸೌಂದಲಗಾ ಗ್ರಾಮದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ೫೦ ಲಕ್ಷ ರೂ. ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ ಚಾಲನೆ ನೀಡಿದರು.

ಮುಖಂಡ ದಾದಾಸಾಹೇಬ ಕಾಂಬಳೆ ಮಾತನಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಪ್ರಯತ್ನದಿಂದ ಸಂತ ನಿರಂಕಾರಿ ಮಂಡಳದ ಕಟ್ಟಡದಿಂದ ಕಾಲುವೆವರೆಗಿನ ಸಿಸಿ ರಸ್ತೆ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ಕುರ್ಲಿ ಸಂಪರ್ಕಿಸುವ ರಸ್ತೆ ಡಾಂಬರೀಕರಣಗೊಳ್ಳಲಿದೆ. ರಸ್ತೆ ಸೌಕರ್ಯದಿಂದ ಪ್ರಯಾಣ ಸುಲಭವಾಗಲಿದೆ ಎಂದರು.

ಮೂವರು ಅಂಗವಿಕಲರಿಗೆ ತ್ರೀ ಚಕ್ರ ವಾಹನ ವಿತರಿಸಲಾಯಿತು.

ಹಾಲಶುಗರ್ಸ್ ನಿರ್ದೇಶಕ ಪ್ರಕಾಶ ಶಿಂಧೆ, ಸಿದ್ದು ನರಾಟೆ ಎಸ್.ಎಸ್. ಢವಣೆ, ಸಂಜಯ ಶಿಂತ್ರೆ, ಕಿರಣ ನಿಕಾಡೆ, ಗಣಪತಿ ಗಾಡಿವಡ್ಡರ್, ಕಿಶೋರ ಹರದಾರೆ, ಅಣ್ಣಾಸಾಹೇಬ ಪಾಟೀಲ, ವಿನೋದ ಮಾನೆ, ಭೀಮರಾವ ಭನ್ಸೆ, ವಿಕ್ರಮ ಪಾಟೀಲ, ಅರ್ಚನಾ ಕೊಗನೋಳೆ, ರೇಖಾ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net