ರಸ್ತೆ ಸುಧಾರಣೆಯಿಂದ ರೈತರಿಗೆ ನೆರವು

24kabbur01 (2)-Web
ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಬಿಜೆಪಿ ಮುಖಂಡ ಪವನ ಕತ್ತಿ, ಸುರೇಶ ಬೆಲ್ಲದ, ಚಿದಾನಂದ ಕಪಲಿ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಬಾಳೇಶ ಕೂಕನೂರ ಇದ್ದರು.
Published on

ಕಬ್ಬೂರ: ಕ್ಷೇತ್ರದಲ್ಲಿ ಕೈಗೊಂಡಿರುವ ರಸ್ತೆ ಸುಧಾರಣೆ ಸೇರಿ ವಿವಿಧ ಕಾಮಗಾರಿಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು
ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ 3.35 ಕೋಟಿ ರೂ. ಅನುದಾನದಡಿ ವಿವಿಧ ರಸ್ತೆಗಳ ಅಭಿವೃದ್ಧಿ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯಿಂದ ಕಬ್ಬೂರ ಪಟ್ಟಣದ ಕಬ್ಬೂರ-ಕೆಂಚನಟ್ಟಿ ಮುಖ್ಯ ರಸ್ತೆಯಿಂದ ಬೆಳಗಲಿ ಕೂಡು ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ., ರಾಯಬಾಗ-ಮಾಡಲಗಿ ರಸ್ತೆಯಿಂದ ಮಂಟೂರೆ ತೋಟದವರೆಗೆ ರಸ್ತೆ ನಿರ್ಮಾಣಕ್ಕಾಗಿ 60 ಲಕ್ಷ ರೂ. ಕಬ್ಬೂರ-ಮೀರಾಪುರಹಟ್ಟಿ ರಸ್ತೆಯಿಂದ ಚಿಮ್ಮಟ ತೋಟದ ರಸ್ತೆ ಅಭಿವೃದ್ಧಿಗೆ 60 ಲಕ್ಷ ರೂ. ಬೃಹತ್ ನೀರಾವರಿ ಇಲಾಖೆಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ 1.35 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ಕಾಮಗೌಡ ತೋಟದ ಬಳಿಯಿಂದ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು. ಪಟ್ಟಣದ ತೋಟಪಟ್ಟಿಗಳ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಬಂದಿದೆ. ಪಟ್ಟಣದ ಅಭಿವೃದ್ಧಿಗೆ ಮತ್ತೆ 5 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದು, ಆ ಮೊತ್ತದಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಮುಖಂಡ ಪವನ ಕತ್ತಿ, ಸಂಕೇಶ್ವರ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಚಿದಾನಂದ ಕಪಲಿ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಬಾಳೇಶ ಕೂಕನೂರ, ಶಿವಪ್ಪ ಚಿಮ್ಮಟ, ಶಂಕರ ಬಿದರಿ, ಕಾಮಪ್ಪ ಕಾಮಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net