

ರಾಯಬಾಗ: ತೋಟದ ರಸ್ತೆ ಸುಧಾರಣೆಯಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಚಿಂಚಲಿ ಪಟ್ಟಣದ ಮುಖ್ಯ ರಸ್ತೆಯಿಂದ ಚಿಂಚಲಿ ಕೋಡಿ ವರೆಗೆ ಹಾಗೂ ಭಿರಡಿ ಗ್ರಾಮದ ಎಮ್ಮೆ ಹಾದಿಯಿಂದ ವಾರಿ ಹಾದಿ ವರೆಗೆ ಜಿಪಂ ಇಲಾಖೆಯಿಂದ ಮಂಜೂರಾದ ೯೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ರಸ್ತೆ ಅಗೆದು ಹಾಳು ಮಾಡಬಾರದು. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದರು.
ಜಿಪಂ ಎಇಇ ವಿ.ಆರ್.ಭಜಂತ್ರಿ, ಸದಲಗಾ ಗುರು ಆಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಮಹಾದೇವ ಬೋರಗಾಂವೆ, ಶ್ರೀಧರ ಕುಡಚೆ, ಅಂಕುಶ ಜಾಧವ, ಶ್ರೀಕಾಂತ ಭೆಂಡೆ, ರಾಜು ಮೈಶಾಳೆ, ಶಂಕರ ನಿಡವಣಿ, ಮಹಾದೇವ ಮಾಳಗೆ, ಶಾನೂ ನಿಡವಣಿ, ಗುರುಪಾದ ತೇಲಿ, ಮಹಾವೀರ ಹಾರೂಗೇರಿ, ಮಲ್ಲು ಪೂಜೇರಿ, ವಿಲಾಸ ಬಸನಾಯ್ಕ, ಕುಮಾರ ಖೋತ, ರಾಜು ವಡ್ಡರ ಇತರರು ಇದ್ದರು.