ರಸ್ತೆ ಸುಧಾರಣೆಗೆ 30 ಲಕ್ಷ ರೂ. ಮಂಜೂರು

22ankola1
Published on

ಅಂಕೋಲಾ: ಮಂಜಗುಣಿ ತಾರಿಯಿಂದ ಮಾರುತಿ ಅಂಗಡಿವರೆಗೆ ಹಾಗೂ ತಾರಿಯಿಂದ ಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆ ಸುಧಾರಣೆ ಕಾಮಗಾರಿಗೆ ತಲಾ 30 ಲಕ್ಷ ರೂ. ಮಂಜೂರಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಮಂಜಗುಣಿಯಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಸಮಸ್ಯೆ ಪರಿಹಾರಕ್ಕೆ 60 ಲಕ್ಷ ರೂ. ಕೇಳಲಾಗಿದೆ. ಇನ್ನಷ್ಟು ಹಣ ಶೀಘ್ರ ಮಂಜೂರು ಮಾಡಿಸಲಾಗುವುದು. ಇಲ್ಲಿಯ ತಡೆಗೋಡೆ ಕಾಮಗಾರಿಗೆ ಈಗಾಗಲೇ ಬೇಲೆಕೇರಿಯಿಂದ ಮಂಜಗುಣಿಯವರೆಗೆ ಕಡಲ ಕೊರೆತಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಜಿ.ಪಂ. ಸದಸ್ಯ ಜಗದೀಶ ನಾಯಕ ಮೊಗಟಾ, ತಹಸೀಲ್ದಾರ್ ಉದಯ ಕುಂಬಾರ, ತಾಪಂ ಇಒ ಪಿ.ವೈ. ಸಾವಂತ, ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷೆ ಲೀಲಾವತಿ ನಾಯ್ಕ, ಸದಸ್ಯ ವೆಂಕಟರಮಣ ಕೆ. ನಾಯ್ಕ, ಪ್ರಮುಖರಾದ ಕೆ.ಡಿ. ನಾಯ್ಕ, ಶ್ರೀಪಾದ ನಾಯ್ಕ, ಶಾಂತಾರಾಮ ನಾಯ್ಕ, ಗೋವಿಂದ ನಾಯ್ಕ, ಹಮ್ಮು ನಾಯ್ಕ, ಚಂದ್ರಕಾಂತ ಹರಿಕಂತ್ರ, ಸವಿತಾ ಬಾನಾವಳಿಕರ, ಬಿಂದೇಶ ನಾಯಕ, ವಿನಾಯಕ ಪಡ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net