ರಸ್ತೆ ಸುಧಾರಣೆಗಾಗಿ ಪ್ರತಿಭಟನೆ 12ರಂದು

3 8 SBD 1 (1) (1)
Published on

ಶಹಾಬಾದ್: ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟನೆ ಸಮಾರಂಭ ಭಾನುವಾರ (ಆ.6) ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಬಹಿಷ್ಕರಿಸಲು ಶಹಾಬಾದ್ ಅಭಿವೃದ್ಧಿ ಹೋರಾಟ ಸಮತಿ ನಿರ್ಧರಿಸಿದೆ ಎಂದು ಅಧ್ಯಕ್ಷ ಮಹ್ಮದ್ ಉಬೇದುಲ್ಲಾ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿಂತನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮೂರು ವರ್ಷದಿಂದ ಶಹಾಬಾದ್ ರೈಲು ನಿಲ್ದಾಣದಲ್ಲಿ ಎಲ್ಲ ರೈಲು ನಿಲ್ಲಿಸಬೇಕು ಎಂದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ರೈಲ್ವೆ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ಸಂಸದರು ಪರಿಣಾಮಕಾರಿಯಾಗಿ ಒತ್ತಡ ಹಾಕುತ್ತಿಲ್ಲ ಎಂದು ದೂರಿದರು.

ವಾಡಿ ಕ್ರಾಸ್‌ನಿಂದ ಮರಗೋಳ ಕಾಲೇಜು, ಜೇವರ್ಗಿ ರಸ್ತೆವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಹದಗೆಟ್ಟ ರೋಡ್ ಸರಿಪಡಿಸಬೇಕು, ತಾಲೂಕು ಕಚೇರಿಗಳನ್ನು ಆರಂಭಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.12ರಂದು ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆದು, ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ರೈಲ್ವೆ ಪೊಲೀಸ್ ಅಧಿಕಾರಿ ಗಜಾನನ ಕೆ., ರೈಲ್ವೆ ಬೇಹುಗಾರಿಕೆ ವಿಭಾಗದ ಅವಿನಾಶ ಪಾಟೀಲ್, ಹೋರಾಟ ಸಮಿತಿಯ ಕೆ.ರಮೇಶ ಭಟ್ಟ, ಕೃಷ್ಣಪ್ಪ ಕರಣಿಕ, ರಾಜೇಶ ಯನಗುಂಟಿಕರ್, ಕಿರಣ ಚವ್ಹಾಣ್, ರಾಜ್ ಮಹ್ಮದ್‌ರಾಜ್, ಬಾಬುರಾವ ಪಂಚಾಳ, ಲೋಹಿತ ಕಟ್ಟಿ, ಡಾ.ಅಹ್ಮದ್ ಪಟೇಲ್, ಬಸವರಾಜ ಸಾತಿಹಾಳ, ಅನೀಲ ಹೀಬಾರೆ, ಶರಣು ಪಗಲಾಪುರ, ಸುರೇಶ ಕುಂಬಾರ, ವಾಸುದೇವ ಚವ್ಹಾಣ್, ಮಹ್ಮದ್ ಅಜರ್, ಮಹ್ಮದ್ ಇಮ್ರಾನ್, ಸದಾನಂದ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net