

ಚಿತ್ರದುರ್ಗ:ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಹೊಳಲ್ಕೆರೆ ರಸ್ತೆವರೆಗೂ ರಸ್ತೆ ವಿಸ್ತರಣೆಗೆ ಕ್ರಮ ವಹಿಸಲು ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಸೂಚಿಸಿದರು. ತಡೆಯಾಜ್ಞೆ ತೆರವುಗೊಳಿಸಬೇಕು. ಡಿವೈಡರ್‌ಗಳನ್ನು ಮತ್ತೆ ಎಲ್ಲಿ ಒಡೆಯ ಬೇಕೆಂಬುದನ್ನು ಗುರುತಿಸಿ ಕಾರ‌್ಯಪ್ರವೃತ್ತರಾಗಬೇಕೆಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಮಾತನಾಡಿ, ನಗರದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. 1001 ಮನೆ ನಿರ್ಮಾಣ ಕಾರ‌್ಯದಲ್ಲಿ ಪ್ರಗತಿಯಾಗಬೇಕು. ಕವಾಡಿಗರಹಟ್ಟಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ವೇಗಗೊಳ್ಳಬೇಕು. ಬಿಡಿ ರಸ್ತೆ ಎಸ್‌ಬಿಐ ವೃತ್ತ-ಗಾಂಧಿ ವೃತ್ತದ ನಡುವೆ ಸ್ಕೈವಾಕ್ ನಿರ್ಮಾಣದ ಪ್ರಸ್ತಾವನೆ ಇದೆ. ಚಳ್ಳಕೆರೆ ಗೇಟ್ ಬಳಿ ವೃತ್ತ ನಿರ್ಮಾಣದ ಅಗತ್ಯವಿದೆ ಎಂದರು.