ರಸ್ತೆ ವಿಸ್ತರಣೆ ಕಾಮಗಾರಿ ಕೈಬಿಡಿ

13 KAMPLI 01
Published on

ಕಂಪ್ಲಿ: ಪಟ್ಟಣದ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆ ಕಾಮಗಾರಿ ಕೈಬಿಡಬೇಕೆಂದು 11 ಮತ್ತು 14ನೇವಾರ್ಡ್ ನಿವಾಸಿಗಳು ಆಗ್ರಹಿಸಿದರು. ಪಟ್ಟಣದ ಅಮೃತಶಿಲಾ ಶ್ರೀ ರಾಮಚಂದ್ರ ದೇವಸ್ಥಾನದಲ್ಲಿ ಗುರುವಾರ ಸಭೆ ನಡೆಸಿ ಈ ಕುರಿತು ಒತ್ತಾಯ ಮಂಡಿಸಿದರು.

ವಾರ್ಡ್ ನಿವಾಸಿ ಕೆ.ಅನಂತಪದ್ಮನಾಭರಾವ್ ಮಾತನಾಡಿ, ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ಬದಿ ಪುರಾತನ ಬಾವಿಗಳಿವೆ. ನಾವು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸುತ್ತಿದ್ದೇವೆ. ಶಾಸಕರು ರಸ್ತೆ ಮಧ್ಯೆಯಿಂದ ಎರಡೂ ಕಡೆ 17.5 ಅಡಿ ತೆರವುಗೊಳಿಸಲು ಕೋರಿದ್ದಾರೆ. ನಾವು ಕಳೆದುಕೊಳ್ಳುವ ಜಾಗಕ್ಕೆ ಪರಿಹಾರ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿಗಳ ಪೈಕಿ ಬಹುತೇಕರು ಆರ್ಥಿಕವಾಗಿ ಹಿಂದುಳಿದಿದ್ದು, ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವು ಮಾಡಿದರೆ ದುರಸ್ತಿಮಾಡಿಕೊಳ್ಳುವಷ್ಟು ಶಕ್ತಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿ, ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನೋಟಿಸ್ ನೀಡದೆ ತೆರವಿಗೆ ಮುಂದಾದಲ್ಲಿ ಯಾರಿಗಾದರೂ ಅನಾಹುತ, ಅವಘಡ ಸಂಭವಿಸಿದರೆ ಪುರಸಭೆ ಆಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಲಾಯಿತು.

ನಿವಾಸಿಗಳಾದ ರಮೇಶ ಬಬಲೇಶ್ವರ, ಗೋವರ್ಧನಗಿರಿ, ಕೆ.ವಿ.ಸಂದೀಪ್, ಗೌಡ್ರು ಗೋಪಾಲಕೃಷ್ಣ, ಶ್ರೀನಿವಾಸ ಕಾಗಲಕರ್, ಜೋಯಿಸ್ ನಾಗರಾಜಾಚಾರ್, ಅಚ್ಚಪ್ಪ ವಿಶ್ವನಾಥ, ವಿಜಯಲಕ್ಷ್ಮೀ, ಜಯಶ್ರೀ, ಎಂ.ಹರ್ಷಿತಾ, ಯು.ಅಮೃತಾ, ಜಿ.ಅನಿಲ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net