ರಸ್ತೆ ವಿಭಜಕಕ್ಕೆ ಕಾರ್ ಡಿಕ್ಕಿ ಇಬ್ಬರ ಸಾವು

ACCIDENT
Published on

ಚಿತ್ರದುರ್ಗ: ತಾಲೂಕಿನ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ. ಸುಚಿತ್ರಾ (35) ಸ್ಥಳದಲ್ಲೇ, ಚಾಲಕ ರಘು (40) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆ ಹಿನ್ನಲೆ: ಬೆಂಗಳೂರು ಮೂಲದ ಅರುಣ್, ಪತ್ನಿ ಸುಚಿತ್ರಾ, ಪುತ್ರ ಯಶಸ್, ಸ್ನೇಹಿತ ರಘು ನಾಲ್ವರು ಬೆಂಗಳೂರಿನಿಂದ ಶಿರಸಿಯ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ, ಪುನಾಃ ಬೆಂಗಳೂರಿಗೆ ಹೊರಟಿದ್ದರು. ಸೀಬಾರ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಅರುಣ್, ಯಶಸ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net