ರಸ್ತೆ ಮೇಲಿನ ವ್ಯಾಪರ ಸಂಚಾರಕ್ಕೆ ಅಡ್ಡಿ

02-07KKR--01
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಕಕ್ಕೇರಾ: ಪಟ್ಟಣದಲ್ಲಿ ಬುಧವಾರಕ್ಕೊಮ್ಮೆ ನಡೆಯುವ ಬೃಹತ್ ಸಂತೆಯಲ್ಲಿ ವ್ತಾಪಾರಸ್ಥರು ರಸ್ತೆಯ ಎರಡೂ ಬದಿ ತಳ್ಳುಬಂಡಿಗಳನ್ನು ನಿಲ್ಲಿಸಿ ವ್ಯಾಪಾರ-ವಹಿವಾಟು ಮಾಡುತ್ತಿರುವುದರಿಂದ ಬಸ್ ಸೇರಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರಶೇಖರ ವಜ್ಜಲ್ ಆರೋಪಿಸಿದ್ದಾರೆ.

ಪ್ರತಿ ಬುಧವಾರ ಇಷ್ಟೇಲ್ಲ ನಡೆಯುತ್ತಿದ್ದರೂ ಪುರಸಭೆ ಸಿಬ್ಬಂದಿ ಮತ್ತು ಪೊಲೀಸರು ಇತ್ತ ಗಮನ ಹರಿಸದಿರುವುದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಪ್ರತಿ ಬುಧವಾರಕ್ಕೊಮ್ಮೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಸಂತೆಗೆ ಪುರಸಭೆ ವ್ಯಾಪ್ತಿಯಲ್ಲದೆ ಕಕ್ಕೇರಾ ಹೋಬಳಿಯ ತಿಂಥಣಿ, ಹುಣಸಿಹೊಳೆ, ದೇವತ್ಕಲ್, ಕಾಮನಟಗಿ, ರಾಯಗೇರಾ ಗ್ರಾಮ, ದೊಡ್ಡಿ, ತಾಂಡಾಗಳ ಗ್ರಾಮೀಣ ಪ್ರದೇಶಗಳಿಂದ ಸಹಸ್ರಾರು ಗ್ರಾಹಕರು ಆಗಮಿಸುತ್ತಿದ್ದರೆ, ಮುz್ದೆÃಬಿಹಾಳ, ನಾಲತವಾಡ, ಕೊಡೇಕಲ್, ಸುರಪುರ, ಹುಣಸಗಿ, ಗುರುಗುಂಟಾ, ತಾಳೀಕೋಟೆ, ದೇವದುರ್ಗ, ಜಾಲಹಳ್ಳಿ ಸಾಲವಾಡಗಿ ಸೇರಿ ಇತರೆ ಪ್ರಮುಖ ತಾಲೂಕುಗಳ ಗ್ರಾಮದಿಂದ ನೂರಾರು ವ್ಯಾಪರಿಗಳು ತಮ್ಮ ತಳ್ಳುಬಂಡಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದು ಅವರು ದೂರಿದರು.

ಪ್ರಮುಖವಾಗಿ ಸಂಗಮೇಶ್ವರ ಮಠದ ಎದುರು, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಬಸ್ ಸೇರಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಸಂಚಕಾರ ಉಂಟಾಗಿದ್ದರೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿಗಳಾಗಲಿ ಇದಕ್ಕು ನಮಗೂ ಸಂಬAಧವಿಲ್ಲದAತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಾಲ್ಮೀಕಿ ವೃತ್ತದಲ್ಲಿರುವ ೪ ಸಿಸಿ ಕ್ಯಾಮರಾ ಸುವ್ಯವಸ್ಥೆಯಲ್ಲಿರದ ಕಾರಣ ಪ್ರತಿದಿನ ಅನೇಕ ಅವಘಡಗಳು ಸಂಭವಿದರೂ ಬೆಳಕಿಗೆ ಬರುತ್ತಿಲ್ಲ. ಸ್ಥಳೀಯ ಉಪ ಠಾಣೆಯಲ್ಲಿ ಪೊಲೀಸರೇ ಇರುವುದಿಲ್ಲ. ಪುರಸಭೆ ಸಿಬ್ಬಂದಿ ಪೋನ್ ರಿಸೀವ್ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಪ್ರತಿ ಬುಧವಾರಕ್ಕೊಮ್ಮೆ ಆಗುವ ಈ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಪುರಸಭೆ ಮತ್ತು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net