

ಗದಗ:
ನಗರದ ತೋಂಟದಾರ್ಯ ರಸ್ತೆ ಪಕ್ಕದ ಕೃಷ್ಣ ಚಿತ್ರಮಂದಿರದ ಎದುರು ಅವ್ಯವಸ್ಥೆ ಕಂಡುಬರುತ್ತಿದೆ. ತೋಂಟದಾರ್ಯ ಮಠದ ಜಾತ್ರೆ ಕಳೆದ ಹಲವು ದಿನಗಳಿಂದ ಜರುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನ ಸಂಚರಿಸುವ ರಸ್ತೆಯನ್ನು ಸ್ವಚ್ಚಗೊಳಿಸದೇ ನಗರಸಭೆ ನಿರ್ಲಕ್ಷ$್ಯ ತೋರಿದೆ. ಜತೆಗೆ ಸಾರ್ವಜನಿಕರು ಜನನಿಬಿಡ ಸ್ಥಳವೆಂದು ಪರಿಗಣಿಸದೇ ರಸ್ತೆ ಪಕ್ಕದಲ್ಲಿ ಮೂತ್ರವಿಸರ್ಜನೆ ಮಾಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ತಿರಾಗುವಂತಾಗಿದೆ.
ಈ ಬಗ್ಗೆ ಸ್ಥಳಿಯರು ಹಲವು ಬಾರಿ ನಗರಸಭೆಗೆ ದೂರು ಸಲ್ಲಿಸಿದ್ದಾರೆ. ಆದಷ್ಟು ಬೇಗ ಸ್ವಚ್ಚಗೊಳಿಸುವಂತೆ ಮನವಿ ಮಾಡಿದ್ದಾರೆ. ಜಾತ್ರೆ ನಡೆಯುತ್ತಿರುವ ಹಿನ್ನೆಲೆ ಈ ಸ್ಥಳವನ್ನು ಉತ್ತಮ ರೀತಿಯಿಂದ ನಿರ್ವಹಣೆ ಮಾಡುವ ಅಗತ್ಯವು ಇದೆ. ಈ ಹಿನ್ನೆಲೆ ನಗರಸಬೆ ಈ ಕಡೆ ಗಮನ ಹರಿಸಬೇಕಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.