

ಚಿತ್ರದುರ್ಗ: ಚಿತ್ರದುರ್ಗ-ಬಾಲೇನಹಳ್ಳಿ ರೈಲ್ವೆ ಹಳಿಯ ಲೆವೆಲ್ ಕ್ರಾಸಿಂಗ್ ನವೀಕರಣ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಚಿತ್ರದುರ್ಗ-ಜೋಡಿಚಿಕ್ಕೇನಹಳ್ಳಿ ರೈಲ್ವೇ ಗೇಟ್ ಮುಚ್ಚಲಾಗುತ್ತದೆ.
ಲಘು ವಾಹನ ಸವಾರರು ಚಿತ್ರದುರ್ಗ, ಹಳೇಕಲ್ಲ ಹಳ್ಳಿ, ಜೋಡಿ ಚಿಕ್ಕೇನಹಳ್ಳಿ, ಎಣ್ಣೆಗೆರೆ ಮಾರ್ಗ ಹಾಗೂ ಭಾರಿ ವಾಹನ ಸವಾರರು ಚಿತ್ರದುರ್ಗ ದೊಡ್ಡಸಿದ್ದವನಹಳ್ಳಿ, ಎಣ್ಣೆಗೆರೆ, ಜೋಡಿಚಿಕ್ಕೇನಹಳ್ಳಿ ಮಾರ್ಗದಲ್ಲಿ ಸಂಚರಿಸುವಂತೆ ಚಿತ್ರದುರ್ಗ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಕಚೇರಿ ಪ್ರಕಟಣೆ ತಿಳಿಸಿದೆ.