ರಸ್ತೆ ಬಿಟ್ಟು ಕಂದಕಕ್ಕೆ ಇಳಿದ ಬಸ್, ಪ್ರಯಾಣಿಕರು ಸೇಫ್!

9Naregal1
Published on

ನರೇಗಲ್ಲ: ಎಕ್ಸೆಲ್​ನ ಪಿನ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಜಾರಿದ ಘಟನೆ ಜಕ್ಕಲಿ ಗ್ರಾಮದ ಸರ್ಕಾರಿ ವಸತಿ ನಿಲಯದ ಹತ್ತಿರ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಾರನಬಸರಿ ಗ್ರಾಮದಿಂದ ಜಕ್ಕಲಿ ಮಾರ್ಗವಾಗಿ ಗದಗ ಕಡೆಗೆ ಬಸ್ ಹೋಗುತ್ತಿತ್ತು. ಜಕ್ಕಲಿ ಗ್ರಾಮದಿಂದ ಹೊರಟ ಬಸ್ ಸರ್ಕಾರಿ ವಸತಿ ನಿಲಯದ ಹತ್ತಿರ ಎಕ್ಸ್​ಲ್​ನ ಪಿನ್ ತುಂಡಾಗಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದೆ. ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹದಿನೈದಕ್ಕೂ ಅಧಿಕ ಪ್ರಯಾಣಿಕರನ್ನು ಉಳಿಸಿದ್ದಾನೆ. ಇಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರೋಣ ಸಾರಿಗೆ ಘಟಕವು ತಾಲೂಕಿನ ಗ್ರಾಮೀಣ ಭಾಗಗಳಿಗೆ ಹಳೇ ಬಸ್ ಓಡಿಸುವ ಮೂಲಕ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net