ರಸ್ತೆ ಬದಿಯಲ್ಲೇ ಹೆರಿಗೆ !

H19 Panjabi Delevery 1
Published on

ಹುಬ್ಬಳ್ಳಿ: ಹೆರಿಗೆ ನೋವು ಕಾಣಿಸಿಕೊಂಡಿದ್ದ ಪಂಜಾಬ್ ಮೂಲದ ಗರ್ಭಿಣಿಯೊಬ್ಬರನ್ನು ಇಲ್ಲಿನ ಗಬ್ಬೂರಿನಿಂದ ಕಿಮ್ಸ್​ಗೆ ಕರೆದೊಯ್ಯುವ ಮಾರ್ಗ ಮಧ್ಯೆ ರಸ್ತೆಬದಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಪಂಜಾಬ್​ನ ಫರೀದಕೋಟ್ ಮೂಲದ ಧರ್ಮಸಿಂಗ್ ಬಾಬುಸಿಂಗ್ ಎಂಬುವರ ಸೊಸೆ ದಾನ್ ಕೌರ್ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಧರ್ಮಸಿಂಗ್ ಕುಟುಂಬದ ಸದಸ್ಯರು ಆಯುರ್ವೆದ ಔಷಧ, ಗಿಡಮೂಲಿಕೆ ಮಾರಾಟ ಮಾಡುತ್ತ ಜೀವನ ಸಾಗಿಸುವ ಅಲೆಮಾರಿಗಳು. ಐದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಐವರು ಮಕ್ಕಳು ಸೇರಿದಂತೆ 15 ಜನರು ಗಬ್ಬೂರಿನಲ್ಲಿ ರಸ್ತೆಬದಿ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ದಾನ್ ಕೌರ್​ಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ಆಟೋದಲ್ಲಿ ಕಿಮ್ಸ್​ಗೆ ಕರೆದುಕೊಂಡು ಹೊರಟಿದ್ದರು. ಬಂಕಾಪುರ ಚೌಕ ಬಳಿ ಆಟೋದಲ್ಲೇ ಹೆರಿಗೆಯಾಗಿದೆ. ಬಳಿಕ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದುಕೊಳ್ಳಲು ಸೂರು ಇಲ್ಲದೆ ಕಂಗಾಲಾಗಿದ್ದ ಅವರು ಇಲ್ಲಿನ ಗಬ್ಬೂರು ಬಳಿ ಪ್ರಾದೇಶಿಕ ಸಾರಿಗೆ ಕಚೇರಿ ಹಿಂಭಾಗದಲ್ಲಿ ಮರದ ಕೆಳಗೆ ಮಹೀಂದ್ರ ವ್ಯಾನ್​ಗೆ ತಾಡಪತ್ರಿ ಕಟ್ಟಿ ಬಾಣಂತಿಗೆ ತಾತ್ಕಾಲಿಕ ಕೋಣೆ ನಿರ್ವಿುಸಿಕೊಟ್ಟಿದ್ದಾರೆ. ಗಬ್ಬೂರು ನಿವಾಸಿಗಳು ಹಾಗೂ ದಾನಿಗಳ ನೆರವಿನಿಂದ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ತವರಿಗೆ ತೆರಳಲು ಸಹಾಯ ಮಾಡಿ

ನಮ್ಮ ಬಳಿ ಮೂರು ವಾಹನಗಳಿವೆ. ಆದರೆ, ಅದಕ್ಕೆ ಡೀಸೆಲ್ ಹಾಕಿಸಿಕೊಂಡು ಪಂಜಾಬ್​ಗೆ ತೆರಳುವಷ್ಟು ಹಣವಿಲ್ಲ. ಹಾಗಾಗಿ, ಪಂಜಾಬ್​ಗೆ ತೆರಳಲು ಸರ್ಕಾರ ಅಥವಾ ಸಂಘ- ಸಂಸ್ಥೆಯವರು ಸಹಾಯ ಮಾಡಬೇಕು ಎಂದು ಧರ್ಮಸಿಂಗ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net