ರಸ್ತೆ ಬದಿ ಆನೆ ಮರಿ ಸಾವು, ಸ್ಥಳದಲ್ಲೇ ಬಿಟ್ಟು ಸಾಗಿದ ಆನೆ ಹಿಂಡು

30 budikote 1
Published on

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಗಾರಬಂಡೆ ಅರಣ್ಯ ಪ್ರದೇಶದ ರಸ್ತೆ ಬದಿ ಭಾನುವಾರ ರಾತ್ರಿ ಜನಿಸಿರುವ ಆನೆ ಮರಿಯೊಂದು ಮೃತಪಟ್ಟಿದೆ.

ತಾಲೂಕಿನ ಗಡಿಭಾಗದಲ್ಲಿರುವ ಬಲಮುಂದೆ ಗ್ರಾಮದ ಬಳಿ ತಿಂಗಳಿಂದ 18 ಆನೆಗಳ ಹಿಂಡು ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಭಾನುವಾರ ರಾತ್ರಿ ರಸ್ತೆ ಪಕ್ಕದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿದೆ. ಆದರೆ ಮರಿ ಮೃತಪಟ್ಟಿದ್ದು, ಆನೆಗಳ ಹಿಂಡು ಮರಿಯನ್ನು ಸ್ಥಳದಲ್ಲೇ ಬಿಟ್ಟು ಸಾಗಿವೆ.

ಗ್ರಾಮಸ್ಥರು ಆನೆಮರಿ ಮೃತಪಟ್ಟಿರುವುದನ್ನು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

30 ಬೂದಿಕೋಟೆ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net