

ಶಹಾಪುರ: ಹದಗೆಟ್ಟು ಹೋಗಿರುವ ತಾಲೂಕಿನ ಶಿರವಾಳ, ಅಣಬಿ, ಹೊಸೂರ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಭೀಮಾ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆ ಕಾರ್ಯಕರ್ತರ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ತಗ್ಗು ಬಿದ್ದ ರಸ್ತೆಗಳಲ್ಲೆ ಓಡಾಟ, ತುರ್ತು ಪರಿಸ್ಥಿತಿಗಳಲ್ಲಿ ಗಂಟೆಗಟ್ಟಲೆ ಪ್ರಯಾಸ. ವಯೋ ವೃದ್ದರು, ಗರ್ಭಿಣಿಯರ ಪರದಾಟ ಹೀಗೆ ನಿತ್ಯ ನರಕಯಾತನೆಗಳ¯್ಲೆ ಕಾಲ ಕಳೆಯುವ ಹೀನಾಯ ಸ್ಥಿತಿ ತಾಲೂಕಿನ ಶಿರವಾಳ ಅಣಿಬಿ, ಹೊಸೂರ, ರೋಜಾ, ಮಡ್ನಾಳ, ಇಟಗಿ, ಸಲಾದಪುರ, ಇಂಗಳಿಗಿ ಗ್ರಾಮಸ್ಥರು ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕರು ಸಚಿವರಾಗಿದ್ದರೂ ಈ ರಸ್ತೆಗಳ ಕಡೆ ಗಮನ ಹರಿಸುತ್ತಿಲ್ಲ. ಈ ರಸ್ತೆ ಮೇಲೆ ಪ್ರತಿ ದಿನ ನೂರಾರು ವಾಹನಗಳು ಓಡಾಡುತ್ತವೆ. ಅಲ್ಲದೆ ರೈತರು ತಮ್ಮ ದೈನಂದಿನ ಹೊಲಗz್ದÉಗಳಿಗೆ ಹೋಗಿ ಎತ್ತಿನ ಬಂಡಿಯಲ್ಲಿ ಬರುತ್ತಿz್ದÁಗ ರಸ್ತೆ ತೆಗ್ಗಿಗೆ ಚಕ್ಕಡಿ ಗಾಲಿ ಸಿಕ್ಕಿಬಿದ್ದು ಉರುಳಿದ ಸಾಕಷ್ಟು ನಿದರ್ಶಗಳಿವೆ. ಬೈಕ್ ಸವಾರರು ಬಿದ್ದು ಕೈ, ಕಾಲು ಮುರಿದುಕೊಂಡಿದ್ದಾರೆ. ಇಷ್ಟೇಲ್ಲ ಸಮಸ್ಯೆ ಇದ್ದರೂ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಈಗಲಾದರೂ ಸಂಬAಧಿಸಿದ ಜನಪ್ರತಿನಿಧಿ ಮತ್ತು ಅದಿಕಾರಿಗಳು ಈ ಗ್ರಾಮಗಳ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮಿತಿ ಸದಸ್ಯ ರಾಜು ಅಣಿಬಿ, ತಾಲೂಕು ಅಧ್ಯP್ಷÀ ಬಸಲಿಂಗಪ್ಪ ಕೊಳಿ, ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮರೆಪ್ಪ ಪ್ಯಾಟಿ, ವರದರಾಜ ಕುಲಕರ್ಣಿ ಶಿರವಾಳ. ಸಾಯಿಬಣ್ಣ ಮುಡಬೂಳ, ಮಡಿವಾಳಪ್ಪ ಅಣಿಬಿ, ರಮೇಶ, ಪ್ರಭು ಅಣಿಬಿ, ಚಂದ್ರು ಕುಂಬಾರ, ಬಸವರಾಜ ಪ್ಯಾಟಿ, ಬಸವರಾಜ ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಬರೆದ ಮನವಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.