ರಸ್ತೆ ದುರಸ್ತಿಗೆ ಮುಂದಾದ ಪಿಡಬ್ಲ್ಯುಡಿ

2srt-2a
Published on

ಶಿರಹಟ್ಟಿ: ಪಟ್ಟಣದ ಪಿಡಬ್ಲ್ಯುಡಿ ಇಲಾಖೆಯು ಕಳೆದರೆಡು ದಿನದಿಂದ ಪಟ್ಟಣದ ಖಬರಸ್ತಾನ ಬಳಿಯ ಶಿರಹಟ್ಟಿ- ಲಕ್ಷೆ್ಮೕಶ್ವರ ರಸ್ತೆ, ಬಾಗಲಕೋಟೆ- ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿಯ ಛಬ್ಬಿ, ಬೆಳ್ಳಟ್ಟಿ, ದೇವಿಹಾಳ ರಸ್ತೆ, ಜತೆಗೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ದುರಸ್ತಿ ಕಾರ್ಯ ಆರಂಭಿಸಿದೆ.

ಕೇಂದ್ರ ಸ್ಥಳದಿಂದ ನಿತ್ಯ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ-57ರ ಮೂಲಕ ನೂರಾರು ವಾಹನಗಳು ಓಡಾಡುತ್ತವೆ. ಪಟ್ಟಣದಿಂದ ಅರ್ಧ ಕಿಮೀ ಸಾಗಿದಂತೆ ಕಿತ್ತು ಹೋದ ರಸ್ತೆ ಹಾಗೂ ತಗ್ಗು-ಗುಂಡಿ ಬಿದ್ದಿದ್ದವು. ಜತೆಗೆ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳ ರಸ್ತೆಗಳು ಅತಿ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದವು. ರಸ್ತೆ ದುರಸ್ತಿ ಮಾಡದ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ‘ಹದಗೆಟ್ಟ ರಾಜ್ಯ ಹೆದ್ದಾರಿ, ತಪ್ಪದ ಕಿರಿಕಿರಿ’ ಎಂಬ ಶೀರ್ಷಿಕೆಯಡಿ 2019ರ ಡಿ. 5 ರಂದು ವಿಜಯವಾಣಿ ವಿಶೇಷ ವರದಿ ಪ್ರಟಿಸಿತ್ತು. ಆಗ ಪಿಡಬ್ಯೂಡಿ ಎಇ ಹೊಸಮನಿ ಅವರು ಭೀಕರ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ದೊರೆತ ಬಳಿಕ ಕೆಲಸ ಆರಂಭಿಸುವುದಾಗಿ ಹೇಳಿದ್ದರು. ಈಗ ದುರಸ್ತಿ ಕೆಲಸ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net