ರಸ್ತೆ ದುರಸ್ತಿಗೆ ಪುರಸಭೆ ಮುಂದಾಗಲಿ

17 MDG 2
Published on

ಮುಂಡರಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 6ನೇ ವಾರ್ಡ್‌ನಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಹಲವು ಸಮಸ್ಯೆಗಳ ಬಗೆಹರಿಸಬೇಕು ಎಂದು ಒತ್ತಾಯಿಸಿ ವಾರ್ಡಿನ ಸಾರ್ವಜನಿಕರು ಮಂಗಳವಾರ ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರಗೆ ಮನವಿ ಸಲ್ಲಿಸಿದರು.

ವಾರ್ಡಿನ ಒಂದನೇ ಕ್ರಾಸ್‌ನ ಕೋಟೆ ಶಾಲೆಯಿಂದ ಕ್ರಾಸ್ ಕೊನೆಯ ವರೆಗೂ ರಸ್ತೆ ಕಾಮಗಾರಿ ನಡೆದಿಲ್ಲ. ಚರಂಡಿ ಕಿತ್ತು ಹೋಗಿದೆ. ಮಳೆ ನೀರು ರಸ್ತೆಯಲ್ಲಿ ನಿಂತು ದುರ್ವಾಸನೆ ಹರಡಿ, ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ. ಚರಂಡಿ ಮೇಲಿನ ಚೇಂಬರ್ ಕಿತ್ತು ಬಂದಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬೀದಿನಾಯಿಗಳ ಉಪಟಳ ತಪ್ಪಿಸಬೇಕು. ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಬಿಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುತ್ತು ಬಳ್ಳಾರಿ, ಶ್ರೀಕಾಂತ ಡೊಣ್ಣಿ, ಶ್ರೀಕಾಂತ ಕೊಂಡಾನವರ, ಮಂಜಪ್ಪ ಮೋರನಾಳ, ಉಮೇಶ ಜೋಳದ, ನಿಜಲಿಂಗಪ್ಪ ಜುಟ್ಲಣ್ಣವರ, ದಾನೇಶ್ವರಿ ಭಜಂತ್ರಿ, ಶಿವಾನಂದ ಡೊಣ್ಣಿ, ಸುರೇಶ ಸಬರದ, ಡಿ.ಪಿ. ರಾಮೇನಹಳ್ಳಿ, ಶೇಖಣ್ಣ ಚಿಂಚಲಿ, ರವಿ ಅರಿಷಿಣದ, ಶೇಖರ ನರೇಗಲ್ಲಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net