

ದೇವರಹಿಪ್ಪರಗಿ: ನಿವಾಳಖೇಡ ಗ್ರಾಮದಲ್ಲಿ ನಲ್ಲಿ ಹಾಗೂ ಚರಂಡಿ ನೀರು ದೇವಸ್ಥಾನದ ರಸ್ತೆ ಸೇರಿದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹರಿದು ನಡೆದಾಡಲು ಬಾರದಂತಾಗಿದೆ. ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಾಪಂ ಸಿಬ್ಬಂದಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ನಿವಾಳಖೇಡ ಗ್ರಾಮದ ಸಾರ್ವಜನಿಕರು ಮಂಗಳವಾರ ತಾಲೂಕು ಪಂಚಾಯಿತಿಗೆ ಆಗಮಿಸಿ ಸಿಬ್ಬಂದಿಗೆ ತಮ್ಮ ಸಮಸ್ಯೆಗಳ ಕುರಿತು ವಿವರಿಸಿದರು. ಗ್ರಾಮದ ರಮೇಶ ದಳವಾಯಿ, ದ್ಯಾಮಗೊಂಡ ಲೋಣಿ ಮಾತನಾಡಿ, ಚರಂಡಿ ಕೊರತೆಯಿಂದ ನಲ್ಲಿಯ ನೀರು ಸೇರಿದಂತೆ ಮಳೆ ಹಾಗೂ ಮಲೀನ ನೀರು ಎಲ್ಲೆಂದರಲ್ಲಿ ನಿಂತು ಸಾರ್ವಜನಿಕರಿಗೆ ನಡೆಯಲು ಬಾರದಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿಯಾದರೂ ಸ್ವತಃ ಪಿಡಿಒ ಗ್ರಾಮಕ್ಕೆ ಆಗಮಿಸಿ ಗ್ರಾಮದ ರಸ್ತೆಗಳನ್ನು ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಒತ್ತಾಯಿಸಿದರು.
ದಾದಾಗೌಡ ಪಾಟೀಲ, ಸೈಫನಸಾಬ್ ಮುಲ್ಲಾ, ತಮ್ಮಣ್ಣ ತಳವಾರ, ಅರ್ಜುನ ತಳವಾರ, ಕಲ್ಲಪ್ಪ ಲೋಣಿ, ದತ್ತು ತಳವಾರ, ಮೈಬೂಬ್‌ಸಾಬ್ ಮುಲ್ಲಾ, ಗುಣಸಾಗರಿ ತಳವಾರ, ಶಂಕ್ರೆಮ್ಮ ತಳವಾರ, ಈಶ್ವರವ್ವ ತಳವಾರ, ಮಲ್ಲಮ್ಮ ತಳವಾರ, ಎಸ್.ಎಂ. ಮುಲ್ಲಾ, ಎಸ್.ಎಸ್. ಕಲ್ಲೂರ, ಸಿ.ಎಸ್. ಕಾರಜೋಳ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.