ರಸ್ತೆ, ಚರಂಡಿ ಮರುನಿರ್ಮಾಣ ಕಾಮಗಾರಿ ಆರಂಭಿಸಿ

8-5
ಕಾರ್ಲಕಟ್ಟಿ ತಾಂಡಾದಿಂದ ಯಕ್ಕುಂಡಿಗೆ ಹೋಗುವ ಒಳಗಿನ ಕಾವಲಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟಿಸಿ, ಕೆಇಬಿ ಮತ್ತು ಪಿಡಿಒ ಶ್ರೀಶೈಲಗೌಡ ಎನ್. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶಂಕರ ಮಾಡಲಗಿ ಇತರರು ಇದ್ದರು.
Published on

ಸವದತ್ತಿ, ಬೆಳಗಾವಿ: ಕೆಲ ದಿನಗಳಿಂದ ಸುರಿದ ಮಳೆಯಿಂದ ತಾಲೂಕಿನ ಹಿರೇಕುಂಬಿ ಮತ್ತು ಧಡೇರಕೊಪ್ಪ ಗ್ರಾಮದಲ್ಲಿನ ರಸ್ತೆ ಮತ್ತು ಚರಂಡಿಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ಮರು ನಿರ್ಮಾಣಕ್ಕಾಗಿ ತಾಲೂಕಾಡಳಿತದಿಂದ ವಿಶೇಷ ಪ್ರಕೃತಿ ವಿಕೋಪದಡಿಯಲ್ಲಿ ಅನುದಾನ ನೀಡಬೇಕೆಂದು ಗ್ರಾಪಂ ಸದಸ್ಯರು ಸವದತ್ತಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು. ಗ್ರಾಪಂ ಸದಸ್ಯರ ಒಕ್ಕೂಟದ ಉಪಾಧ್ಯಕ್ಷ ಗಂಗಯ್ಯ ಅಮೋಘಿಮಠ ಮಾತನಾಡಿ, ಎರಡ್ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಹಿರೇಕುಂಬಿ ಮತ್ತು ಧಡೇರಕೊಪ್ಪದಲ್ಲಿನ ಜನತೆ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ಸಂಪರ್ಕ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಂಕಷ್ಟದಿಂದ ಜನತೆ ಪರದಾಡುವಂತಾಗಿದೆ. ಹೀಗಾಗಿ ತಾಲೂಕಾಡಳಿತದಿಂದ ವಿಶೇಷ ಅನುದಾನ ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷ ಫಕೀರಪ್ಪ ಕೊಳ್ಳಿ, ಉಪಾಧ್ಯಕ್ಷ ನಿಂಗಪ್ಪ ಮೇಟಿ, ಗೇನಯ್ಯ ಅಮೋಘಿಮಠ, ಗುಡುಸಾಬ ಮುಲ್ಲಾ, ಕಮಲವ್ವ ಅಬಚಿ, ಅಜರತ್‌ಹುಸೇನಿ ಮುಲ್ಲಾ, ಶೇಖಪ್ಪ ದೇಶನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net