

ಬಸವಕಲ್ಯಾಣ: ಪತರ್ಾಪುರ ರಸ್ತೆಯ ಮೇಲೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ತಗ್ಗು-ಗುಂಡಿಗಳನ್ನು ಮುಚ್ಚಿ ಯುವಕರು ಮಾದರಿಯಾಗಿದ್ದಾರೆ.
ಬಸವಕಲ್ಯಾಣ- ಪತರ್ಾಪುರ ರಸ್ತೆ ಹದಗೆಟ್ಟಿದ್ದು, ಹಲವೆಡೆ ತಗ್ಗು-ಗುಂಡಿ ಬಿದ್ದಿವೆ. ಎರಡು ಸ್ಥಳದಲ್ಲಿ ದೊಡ್ಡ ತಗ್ಗು ಬಿದ್ದಿದ್ದು, ಇವು ಸಂಚಾರಕ್ಕೆ ತೊಡಕಾಗುತ್ತಿದ್ದವು. ರಸ್ತೆ ದುರಸ್ತಿಗೆ ಮನವಿಪತ್ರ ಸಲ್ಲಿಸಿ ವರ್ಷವಾದರೂ ಪರಿಹಾರ ಸಿಕ್ಕಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಧ್ಯೆ ಗ್ರಾಮದ ಕೆಲ ಯುವಕರು ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಿಮರ್ಾಣವಾಗಿದ್ದ ತಗ್ಗುಗಳನ್ನು ಟಾ್ರೃಕ್ಟರ್ ಮಾಲೀಕ ರವಿ ಬೇಲೂರೆ ಹಾಗೂ ಮುಖಂಡ ಬಸವರಾಜ ಅಷ್ಟಗೆ ಅವರ ಸಹಕಾರದೊಂದಿಗೆ ಭಾನುವಾರ ಮುರುಮ್ ಹಾಕಿ ಮುಚ್ಚಿದ್ದಾರೆ.
ಗ್ರಾಮದ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಜತೆಗೆ ಮಹಾರಾಷ್ಟ್ರದಿಂದಲೂ ವಾಹನ ಸಂಚರಿಸುತ್ತವೆ. ದುರಸ್ತಿಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಎಂದು ಸ್ಥಳೀಯರಾದ ಶಿವಕುಮಾರ ಕುದರೆ ಮನವಿ ಮಾಡಿದ್ದಾರೆ.