ರಸ್ತೆ ಗುಂಡಿ ಮುಚ್ಚಲು ವಿನೂತನ ಪ್ರತಿಭಟನೆ

13 ckm 5
ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ರಸ್ತೆಗುಂಡಿ ಮುಚ್ಚುವಂತೆ ಸ್ಥಳೀಯ ಆಡಳಿತದ ವಿರುದ್ಧ ವ್ಯಂಗ್ಯ ಭರಿತ ಬ್ಯಾನರ್ ಹಾಕುವ ಮೂಲಕ ವಿನೂತನ ಪ್ರತಿಭಟನೆ ನಡೆಸಿರುವುದು.
Published on

ಚಿಕ್ಕಮಗಳೂರು: ಹೊಂಡ ಗುಂಡಿಗಳಿAದ ಹತಾಶೆ ಮತ್ತು ಆಕ್ರೋಶಗೊಂಡ ಜನ ಪ್ರತಿಭಟನೆಯ ವಿನೂತನ ಹಾದಿ ಕಂಡುಕೊAಡಿದ್ದಾರೆ. ಈಗಾಗಲೇ ವಿಜಯಪುರದ ಮುಖ್ಯ ರಸ್ತೆಯ ಗುಂಡಿಗಳಿಗೆ ಪೂಜೆ ಸಲ್ಲಿಸಿ ಎಡೆ ಅರ್ಪಿಸಿದ್ದ ಕೆಲ ಯುವಕರು ಇಂದು ವಿನೂತನ ರೀತಿಯ ಫಲಕ ಹಾಕಿ ನಗರ ಸಭೆಗೆ ಛೀಮಾರಿ ಹಾಕಿದ್ದಾರೆ.

ಗುಂಡಿ ಮುಚ್ಚದಿರಲು ನಿಧಿ ಇದೆ ಎಂಬ ಆಸೆಯಿಂದ ಕಾಯುತ್ತಿರುವ ನಗರಸಭೆ ಶೀರ್ಷಿಕೆ ಅಡಿ ಫಲಕ ಹಾಕಲಾಗಿದೆ. ಎಚ್ಚರವಾಗಿ ಚಲಿಸಿ ಗುಂಡಿಗೆ ಬಿದ್ದರೆ ನಿಧಿ ಸಿಗುವುದಿಲ್ಲ ಎಂದು ನಗರಸಭೆ ಆಡಳಿತವನ್ನು ಅಣಕಿಸಲಾಗಿದೆ.

ಎಲ್ಲಾ ಜನ ಪ್ರತಿನಿಧಿಗಳಿಗೆ ವಿಜಯಪುರ ಮುಖ್ಯ ರಸ್ತೆಯ ನಾಗರಿಕರಿಂದ ಗೌರವ ವಂದನೆ ಎಂದೂ ವ್ಯಂಗ್ಯವಾಡಿದ್ದಾರೆ. ಮೊನ್ನೆ ತಿಳಿಸಿದಂತೆ ಶೀಘ್ರದಲ್ಲೇ ಹಾಲುತುಪ್ಪ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬ್ಯಾನರ್‌ನಲ್ಲಿ ಮನವಿ ಮಾಡಲಾಗಿದೆ. ನಗರಸಭೆಯ ಇತರೆ ವಾರ್ಡುಗಳಿಗೂ ಇಂತಹ ಪ್ರತಿಭಟನೆಯ ಬಿಸಿ ಹಬ್ಬುವ ಮೊದಲು ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net