ರಸ್ತೆ ಕಾಮಗಾರಿಗಿಲ್ಲ ದುರಸ್ತಿ ಭಾಗ್ಯ

1-02
Published on

ಸಂಚಾರಕ್ಕೆ ಸಂಚಕಾರ - ಅಧಿಕಾರಿಗಳಿಗೆ ತಾವರೆಕೆರೆ ಗ್ರಾಮಸ್ಥರಿಂದ ಹಿಡಿಶಾಪ

ಎ.ಅಪ್ಪಾಜಿಗೌಡ ಮುಳಬಾಗಿಲು: ಮುಳಬಾಗಿಲು ತಾಲೂಕಿನ ತಾವರೆಕೆರೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ರಸ್ತೆಗೆ ಜಲ್ಲಿ ಹಾಕಿ ಒಂದೂವರೆ ವರ್ಷ ಕಳೆದರೂ ಇದುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದಿರುವುದು ದುರಂತ. ಗ್ರಾಮದ ಬಹುತೇಕರ ಜಮೀನುಗಳು ಸದರಿ ರಸ್ತೆಗೆ ಹೊಂದಿಕೊಂಡಿದ್ದು, ಎಲ್ಲರೂ ಪ್ರತಿ ದಿನ ಈ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಯಾವಾಗ ಈ ರಸ್ತೆಗೆ ಮುಕ್ತಿ ದೊರೆಯುತ್ತದೆಯೋ ಎಂದು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಅಧಿಕಾರಿಗಳ ರ್ನಿಲಕ್ಷ$್ಯ: ಅರ್ಧಮರ್ದ ದುರಸ್ತಿಗೊಂಡ ತಾವರೆಕೆರೆ ರಸ್ತೆಗೆ ನರೇಗಾಯೋಜನೆಯಡಿಯಲ್ಲಿ 9 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೂ ಅಧಿಕಾರಿಗಳ ರ್ನಿಲಕ್ಷ್ಯದಿಂದ ರಸ್ತೆ ಕಾಮಗಾರಿ ಸ್ಥಗಿತ ಗೊಂಡಿದೆ. ನರೇಗಾ ಯೋಜನೆ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದು ಅಸಹನೀಯ ಎಂದು ಈ ಭಾಗದ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಲವೆಡೆ ಸಂಪರ್ಕ: ತಾವರೆಕೆರೆ ಗ್ರಾಮದಿಂದ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕ ಹಾಗೂ ಕೊಲದೇವಿ ಗರುಡ, ಮಂಡಿಕಲ್ಲು ಚೌಡೇಶ್ವರಿ, ಹರಪನಾಯಕನಹಳ್ಳಿ ಬಿಸ್ಸೇಗೌಡ ಕೋಟೆ, ದುಗ್ಗಸಂದ್ರ ಹೋಬಳಿ ಕೇಂದ್ರ ಸ್ಥಾನ, ಎಚ್​.ಗೊಲ್ಲಹಳ್ಳಿ ಗ್ರಾಪಂ ಕಚೇರಿಗೆ, ಮುಳಬಾಗಿಲು ಗೂಕುಂಟೆ, ಆಂಧ್ರಪ್ರದೇಶದ ರಾಮಸಮುದ್ರಂ, ಶ್ರೀನಿವಾಸಪುರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಪ್ರತಿದಿನ ಗ್ರಾಮದ ಮುಖ್ಯರಸ್ತೆಯಲ್ಲಿ ಹೆಚ್ಚಿನ ವಾಹನಗಳು ಮತ್ತು ಸಾರ್ವಜನಿಕರು ಸಂಚರಿಸುತ್ತಾರೆ.

ಮಾರ್ಗದುದ್ದಕ್ಕೂ ಕೆರೆ-ಕುಂಟೆ: ಗ್ರಾಮದ ಸುತ್ತಮುತ್ತಲಿರುವ ಹೊಸಕೆರೆ, ಬೊಡನಯ್ಯನಕೆರೆ ಕಬ್ಬುಕೆರೆ, ಗೌಡಕೆರೆ, ಹಾಲಕೆರೆ, ಸೊರೆಕೆರೆ ಸೇರಿ ಹತ್ತಾರು ಕುಂಟೆಗಳಿಗೆ ತಾವರೆಕೆರೆ ರಸ್ತೆಯೇ ಸಂಪರ್ಕ ಕಲ್ಪಿಸುತ್ತದೆ. ಅದರೊಂದಿಗೆ ಹೊಲ&ಗದ್ದೆಗಳಲ್ಲಿ ತೆರಳಬೇಕಾದರೆ ರೈತರು ಇದೇ ಮಾರ್ಗವನ್ನು ಆಶ್ರಯಿಸಿದ್ದು, ರಸ್ತೆ ಜಲ್ಲಿಕಲ್ಲುಗಳಿಂದ ಕೂಡಿರುವ ಕಾರಣ ಸುಮಗ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಗ್ರಾಮದ ಸುತ್ತಮುತ್ತಲಿರುವ ಹೊಸಕೆರೆ, ಬೊಡನಯ್ಯನಕೆರೆ ಕಬ್ಬುಕೆರೆ, ಗೌಡಕೆರೆ, ಹಾಲಕೆರೆ, ಸೊರೆಕೆರೆ ಸೇರಿ ಹತ್ತಾರು ಕುಂಟೆಗಳಿಗೆ ತಾವರೆಕೆರೆ ರಸ್ತೆಯೇ ಸಂಪರ್ಕ ಕಲ್ಪಿಸುತ್ತದೆ. ಅದರೊಂದಿಗೆ ಹೊಲ-ಗದ್ದೆಗಳಲ್ಲಿ ತೆರಳಬೇಕಾದರೆ ರೈತರು ಇದೇ ಮಾರ್ಗವನ್ನು ಆಶ್ರಯಿಸಿದ್ದು, ರಸ್ತೆ ಜಲ್ಲಿಕಲ್ಲುಗಳಿಂದ ಕೂಡಿರುವ ಕಾರಣ ಸುಮಗ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಾನುವಾರು ಯಾತನೆ: ಜನರಿಂದಲೇ ನಡೆಯಲಾಗದ ಜಲ್ಲಿಕಲ್ಲಿನ ರಸ್ತೆಗೆ ಹೊಂದಿಕೊಂಡಂತೆ ಅರಣ್ಯ ಪ್ರದೇಶವಿದ್ದು, ಅರಣ್ಯದಲ್ಲಿ ಮೇಯಿಸಲು ಕುರಿ, ಎಳೆ ಕುರಿಮರಿ, ಮೇಕೆ, ಹಸು, ಎಮ್ಮೆಯಂತಹ ಜಾನುವಾರುಗಳನ್ನು ಹೊಡೆದುಕೊಂಡು ಕುರಿಗಾಹಿಗಳು ಈ ಮಾರ್ಗದಲ್ಲೇ ಹೋಗುತ್ತಾರೆ. ಆದರೆ ದೊಡ್ಡ ಪ್ರಮಾಣದ ಜಲ್ಲಿಕಲ್ಲುಗಳ ಮೇಲೆ ನಡೆದಾಡಲು ಜಾನುವಾರುಗಳು ಹರಸಾಹಸ ಪಡುತ್ತಿವೆ. ಮೂಕ ಜೀವಿಗಳ ಗೋಳು ಹಾಗೂ ಅವು ನಡೆಯುವಾಗ ಪಡುವ ಯಾತನೆಯನ್ನು ಹೇಳತೀರದು ಎಂದು ಕುರಿಗಾಹಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ನರೇಗಾ, ಪಿಡಿಒ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆ ಪರಿಶೀಲಿಸಿದ್ದು, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇಲ್ಲಿನ ರಸ್ತೆಯಲ್ಲಿ ಜನಸಾಮಾನ್ಯರು, ಕೂಲಿ ಕಾರ್ಮಿಕರು, ರೈತರು, ವೃದ್ಧರು, ಮಕ್ಕಳು, ದನಕರು, ಜಾನುವಾರುಗಳು ಸಂಚರಿಸುತ್ತವೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸಬೇಕಿದೆ. ಈ ಕೂಡಲೇ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು. -ಕೆ.ಮಂಜುನಾಥ್​, ತಾವರೆಕೆರೆ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net