

ಕಲಬುರಗಿ: ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ರಸ್ತೆ ಗುತ್ತಿಗೆ ಹಿಡಿದವರು ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮಾಡಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
೨೦೨೩&-೨೪ ನೇ ಸಾಲಿನ ಎಸ್ಎಚ್ಡಿಪಿ ಯೋಜನೆ ಅಡಿ ೫ನೇ ಹಂತ ಮಂಜೂರಾದ ತಾಲೂಕಿನ ನಂದೂರ (ಬಿ) ಗ್ರಾಮದಿಂದ ಬಾಪೂನಾಯಕ ತಾಂಡಾವರೆಗೆ ೧೦ ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ, ಕ್ಷೇತ್ರದ ಎಲ್ಲರ ಆಶರ‍್ವಾದಿಂದ ಶಾಸಕನಾಗಿದ್ದು, ಅವರ ಋಣ ತೀರಿಸುವ ಜವಾಬ್ದಾರಿ ಇದೆ ಎಂದು ಹೇಳಿದರು.
ಬಹುದಿನ ಬೇಡಿಕೆ ಕುಸನೂರ ತಾಂಡಾದ ರಸ್ತೆ ಬೇಡಿಕೆ ಇದ್ದು, ಶ್ರೀ ಈಡೇರಿಸಲಾಗುವುದು. ಗಂಗಮ್ಮ ದೇವಿ ಗುಡಿವರೆಗೆ ರಸ್ತೆ ಸೇರಿ ಕ್ಷೇತ್ರದ ಜನರ ಎಲ್ಲ ಸೌಲಭ್ಯ, ಸೌರ‍್ಯ ಒದಗಿಸಲಾಗುವುದು. ರ‍್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಎಲ್ಲರಿಗೂ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಮುಖಂಡ ರಾಜಕುಮಾರ ಚವ್ಹಾಣ್ ಮಾತನಾಡಿ, ಪ್ರಗತಿ ಕರ‍್ಯಕ್ಕೆ ಎಲ್ಲರೂ ಸಾಥ್ ನೀಡಬೇಕು. ಶಾಸಕ ಮತ್ತಿಮಡು ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದು, ಎಲ್ಲರೂ ಕೂಡಿ ಗ್ರಾಮ, ತಾಂಡಾಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ರೇಣುಕಾ ರಾಠೋಡ ಮಾತನಾಡಿದರು. ನಂದೂರ ಗ್ರಾಮದಿಂದ ಬಾಪುನಾಯಕ ತಾಂಡಾವರೆಗೆ ಬೃಹತ್ ಬೈಕ್ ರ‍್ಯಾಲಿಸಿ, ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಸೇವಾಲಾಲ್ ಮಂದಿರದವರೆಗೆ ಮಹಿಳೆಯರಿಂದ ಕುಂಬಕಳಶ ಮೆರವಣಿಗೆ ಜರುಗಿತು.
ನಂದೂರಿನ ಶ್ರೀ ಗಂಗಾಧರ ಹಿರೇಮಠ ಸ್ವಾಮೀಜಿ, ಗ್ರಾಮಿಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್ ಬೋಧನ, ಮುಖಂಡರಾದ ವಿನೋದ ಪಾಟೀಲ್ ಸರಡಗಿ, ಮಹಾಂತಗೌಡ ಪಾಟೀಲ್, ನಾಗರಾಜ ಕಲ್ಲಾ, ರೇವಣಸಿದ್ದ ಸ್ವಾಮಿ, ಶಿವಕುಮಾರ ಗುತ್ತೇದಾರ, ಮಲ್ಲಿಕರ‍್ಜುನ, ಶಾಂತಪ್ಪ ಪೂಜಾರಿ, ಶಿವಮರ‍್ತಿ, ಅರುಣಕುಮಾರ ಪಾಟೀಲ್, ಅಶೋಕ ಬಬಲಾದ, ಶಕಂರ ಜಾಧವ, ಮುನ್ನಾಗೌಡ ಜಾಪುರ, ಅರುಣ ರಾಠೋಡ್, ಬಿಕ್ಕುಸಿಂಗ್ ರಾಠೋಡ, ಸಂಗಮೇಶ ಇತರರಿದ್ದರು. ಶಾಂತಕುಮಾರ ಪಾಟೀಲ್ ನಿರೂಪಣೆ ಮಾಡಿದರು.