ರಸ್ತೆ ಕಾಮಗಾರಿ ಕಳಪೆ ಆರೋಪ

c87fcce0-ca2b-462c-9bbf-f468ecfb3cbc
Published on

ಕೊಪ್ಪಳ: ಕಾರಟಗಿ-ಗೂಡೂರು ರಸ್ತೆ ಕಳಪೆಯಾಗಿದ್ದು, ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬುಗೆ ಮನವಿ ಸಲ್ಲಿಸಿದರು.

ರಸ್ತೆಯೂ ಕನಕಗಿರಿ ತಾಲೂಕಿನ ನವಲಿ ರೈಸ್ ಟೆಕ್ನಾಲಜಿ ಪಾರ್ಕ್ ಮುಂದೆ ಹಾದು ಹೋಗುತ್ತದೆ. ಇಲ್ಲಿ ಕಳಪೆಯಾಗಿ ನಿರ್ಮಿಸಲಾಗಿದೆ. ಇದರಿಂದ ಮುಂದೆ ರೈತರಿಗೆ ತೊಂದರೆಯಾಗಲಿದೆ. ಇಂಜಿನಿಯರ ದೇವೆಂದ್ರಪ್ಪನಿಗೆ ವಿಷಯ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ರೈತರ ಮಾತು ಕಿವಿಗೆ ಹಾಕಿಕೊಂಡಿಲ್ಲ. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೂ ಸಕಾಲಕ್ಕೆ ನೀಡುತ್ತಿಲ್ಲವೆಂದು ಆರೋಪಿಸಿದರು.

ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ಸರಿಪಡಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ಸಂಬಂಧ ಈಗಾಗಲೇ ಎರಡು ಅರ್ಜಿ ಸಲ್ಲಿಸಿದ್ದು ಕ್ರಮ ಕೈಗೊಂಡಿಲ್ಲ. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಹನುಮಂತ ಹಂಚಿನಾಳ ಕ್ಯಾಂಪ್, ಮೋಹನ ಹಾಲಸಮುದ್ರ, ವೀರೇಶ ಕತ್ತಿ, ಅಂಬೋಜಿರಾವ್, ಲಕ್ಷ್ಮಣ, ರಮೇಶ ಕಂಪ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net