ರಸ್ತೆ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ

1Rayabag1
Published on

ರಾಯಬಾಗ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ನಸಲಾಪುರ ಗ್ರಾಮದ ಮಲ್ಲು ಕೋರೆ ತೋಟದಿಂದ ಮನೋಹರ ಸನದಿ ತೋಟದ ವರೆಗೆ ೪೦ ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಯಡ್ರಾಂವ ಗ್ರಾಮದಲ್ಲಿ ೩೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ, ನಸಲಾಪುರ ಗ್ರಾಪಂ ಅಧ್ಯಕ್ಷ ಅರುಣ ನಾಯಕ, ಮಹಾದೇವ ಕಾಂಬಳೆ, ನೇಮಣ್ಣ ಖೋಮಬಾರೆ, ಚೌಗೊಂಡ ಪಾಟೀಲ, ನಿಂಗಪ್ಪ ಕುಂಬಾರ, ರಾಜು ಪರಮಾಜೆ, ಅನಿಲ ಪಾಟೀಲ, ಬಾಳಾಸಾಹೇಬ ಪಾಟೀಲ, ಶಿವಾನಂದ ಕುಂಬಾರ, ಅದಗೌಡ ಪಾಟೀಲ, ಯಡ್ರಾಂವ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಧನಗರ, ಅಕ್ಕತಾಯಿ ಐಹೊಳೆ, ಕಲ್ಲಪ್ಪ ನಿಂಗನೂರೆ, ಹಾಲಪ್ಪ ಧನಗರ, ಬಾಲಚಂದ್ರ ದತ್ತವಾಡೆ, ಸುರೇಶ ಐಹೊಳೆ, ಅಜಿತ್ ಸಂಗಮೇಶ್ವರ, ಮುರುಗೇಶ ಮಾಳಿ, ಶ್ರೀಕಾಂತ ಪಡಲಾಳೆ, ಅಭಯಂತರ ಎಸ್.ಎಸ್.ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net