

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿಯ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಟಿ.ರಾಮಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಹಂಡ್ರಂಗಿ ಗ್ರಾಮದಲ್ಲಿ ಎಸ್‌ಎಚ್‌ಡಿಪಿ ಯೋಜನೆಯಡಿ 17.16 ಕೋಟಿ ರೂ. ವೆಚ್ಚದಲ್ಲಿ ಕೊಡಗಿನ ಗಡಿವರೆಗಿನ ರಸೆ ಅಭಿವೃದ್ಧಿಗೆ ಹಾಗೂ ಹಂಡ್ರಂಗಿಯಲ್ಲಿ 1.60 ಕೋಟಿ ರೂ., ಅಂಕನಹಳ್ಳಿಯಲ್ಲಿ 10 ಲಕ್ಷ ರೂ., ಹೆಗ್ಗತ್ತೂರಿನಲ್ಲಿ 5.50 ಲಕ್ಷ ರೂ., 5 ಲಕ್ಷ ರೂ.ವೆಚ್ಚದ ಸಬ್ಬತ್ತಿಗೆ ಹೋಗುವ ರಸ್ತೆ, ಮಾಳೇನಹಳ್ಳಿಯಲ್ಲಿ 95 ಲಕ್ಷ ರೂ., ಬಿಸಲಹಳ್ಳಿಯಲ್ಲಿ 6 ಲಕ್ಷ ರೂ., ಕೆಸವತ್ತೂರಿನಲ್ಲಿ 36 ಲಕ್ಷ ರೂ., ನೆಹರು ನಗರದಲ್ಲಿ 25 ಲಕ್ಷ ರೂ.ವೆಚ್ಚದ ಸಮುದಾಯ ಭವನ, ಕಾಂಕ್ರೀಟ್, ಡಾಂಬರ್ ರಸ್ತೆ, ಶಾಲಾ ಅಭಿವೃದ್ಧಿ ಸೇರಿದಂತೆ ಒಟ್ಟು 20.59 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಹಂಡ್ರಂಗಿ ಗ್ರಾಪಂ ಅಧ್ಯಕ್ಷೆ ಅಂಜಲಿ, ಉಪಾಧ್ಯಕ್ಷ ದಿವಾಕರ, ಲೋಕೋಪಯೋಗಿ ಇಲಾಖೆಯ ಎಇಇ ಗಣೇಶ್, ಹೇಮಾವತಿ ವಿಭಾಗದ ಎಇಇ ಕೇಶವಮೂರ್ತಿ, ಜಿಪಂ ಎಇಇ ರಾಜೇಂದ್ರ, ಪಿಡಿಒ ಗಿರೀಶ್, ಸದಸ್ಯರಾದ ಕಲೀಂ ಉನ್ನಿಸಾ, ರುಕ್ಮಿಣಿ, ಸುಭಾಷ್, ಶಿವಕುಮಾರ್, ಪುಟ್ಟರಾಜೇ ಆರಸ್, ಜಗದೀಶ್, ಶಿಶಿರ್ ಹಾಗೂ ಗ್ರಾಮಸ್ಥರು ಇದ್ದರು.