ರಸ್ತೆ ಅಪೂರ್ಣ ಕಾಮಗಾರಿ ಶೀಘ್ರ ಪೂರ್ಣ

Shankaragowda Somanala, CM, Black Bhavauta, Performance, Muddebihala,
ಮುದ್ದೇಬಿಹಾಳ ಪಟ್ಟಣದ ನಾಲತವಾಡ ಮುಖ್ಯ ರಸ್ತೆಯ ಮಹೆಬೂಬನಗರ ನಿವಾಸಿಗಳ ಅಹವಾಲನ್ನು ತಾಲೂಕು ಉಸ್ತುವಾರಿ, ಕೆಎಎಸ್ ಅಧಿಕಾರಿ ಶಂಕರಗೌಡ ಸೋಮನಾಳ ಆಲಿಸಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಮುಖಂಡ ಗುಲಾಮಮೊಹಮ್ಮದ್ ದೇದಾರ, ಅಲ್ಲಾಭಕ್ಷ ಟಕ್ಕಳಕಿ ಇತರರಿದ್ದರು.
Published on

ಮುದ್ದೇಬಿಹಾಳ: ಪಟ್ಟಣದ ಇಂದಿರಾ ವೃತ್ತದಿಂದ ಮಹೆಬೂಬನಗರ ಬಡಾವಣೆಯ ಮೂಲಕ ಹಾಯ್ದು ಹೋಗುವ ಹಳ್ಳೂರ ಪೆಟ್ರೋಲ್ ಬಂಕ್‌ವರೆಗಿನ ನಾಲತವಾಡ ಮುಖ್ಯ ರಸ್ತೆಯ ಅಪೂರ್ಣ ಕಾಮಗಾರಿಯನ್ನು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ- ತಾಲೂಕು ಉಸ್ತುವಾರಿ ಕೆಎಎಸ್ ಅಧಿಕಾರಿ ಶಂಕರಗೌಡ ಸೋಮನಾಳ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕಾಮಗಾರಿ ಪೂರ್ಣಗೊಳಿಸದಿದ್ದರೆ ೆ.2 ರಂದು ಈ ರಸ್ತೆ ಮೂಲಕ ಕವಡಿಮಟ್ಟಿಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸಲು ತೆರಳುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದ ಬಡಾವಣೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಅವರು ಶೀಘ್ರವೇ ರಸ್ತೆ ಮತ್ತು ಚರಂಡಿಯ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆ ವಿಭಜಕದಲ್ಲಿ ಹಾಕಿರುವ ಮುಳ್ಳುಕಂಟಿ ತೆರವುಗೊಳಿಸಿ ಕಬ್ಬಿಣದ ಗ್ರಿಲ್ ಅಳವಡಿಸುವುದಾಗಿ ತಿಳಿಸಿದರು. ೆ.2 ರಂದು ಕಪ್ಪು ಬಾವುಟ ಪ್ರದರ್ಶನ ಕೈಬಿಡುವಂತೆ ಕೋರಿದರು.

ಮುಖಂಡರಾದ ಮಹೆಬೂಬ ನಾಗರಾಳ, ಗುಲಾಮಮೊಹ್ಮದ ದೇದಾರ ಅವರು ಮಾತನಾಡಿ, ಅಪೂರ್ಣಗೊಂಡಿರುವ ರಸ್ತೆ, ಇನ್ನಿತರ ಕೆಲಸಗಳನ್ನು ಪೂರ್ಣಗೊಳಿಸುವ ಬಗ್ಗೆ ಮನವಿ ಮಾಡಿಕೊಂಡರೂ ಪಿಡಬ್ಲುೃಡಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಪ್ಪು ಬಾವುಟ ಪ್ರದರ್ಶನದ ಬಗ್ಗೆ ಲಿಖಿತ ಪತ್ರ ಕೊಟ್ಟಿದ್ದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮನಾಳ ಅವರು ಸೋಮವಾರದಿಂದಲೇ ಬಾಕಿ ಕೆಲಸ ಪ್ರಾರಂಭಿಸಲು ಪಿಡಬ್ಲುೃಡಿ ಅವರಿಂದ ಸ್ಪಷ್ಟತೆ ಸಿಗಲಿದೆ. ಹೀಗಾಗಿ ಪ್ರತಿಭಟನೆಗೆ ಮುಂದಾಗದಂತೆ ಹೇಳಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಬಡಾವಣೆಯ ನಿವಾಸಿ ಅಲ್ಲಾಭಕ್ಷ ಟಕ್ಕಳಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net