ರಸ್ತೆ ಅಪಘಾತದಲ್ಲಿ ಸವಾರ ಸಾವು

13-7HBD1
Published on

ಹುಮನಾಬಾದ್: ಕನಕಟ್ಟಾ-ಮಾಣಿಕನಗರ ಮಧ್ಯೆ ಗುರುವಾರ ಟಿಪ್ಪರ್ ಡಿಕ್ಕಿಯಾಗಿ ಬೈಕ್ ನಜ್ಜುಗುಜ್ಜಾಗಿ ಬೆಂಕಿ ಹತ್ತಿಕೊಂಡು ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರದ ರೋಹಿತ ಮಾಣಿಕ(೨೩) ಮೃತಪಟ್ಟವ. ಈತನ ಜತೆಗಿದ್ದ ರಾಜೇಶ್ವರದ ಶ್ರೀಕಾಂತ, ಶಿವಕುಮಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಟ್ಟಾ ಕಡೆಯಿಂದ ಹುಮನಾಬಾದ್‌ನತ್ತ ಮೂವರು ಬೈಕ್‌ನಲ್ಲಿ ಬರುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ತಲೆ ಛಿದ್ರವಾಗಿದ್ದು, ಬೈಕ್‌ಗೆ ಬೆಂಕಿ ಹತ್ತಿ ಸುಟ್ಟು ಕರಲಾಗಿದೆ. ಸ್ಥಳಕ್ಕೆ ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಬಸವರಾಜ, ಎಎಸ್‌ಐ ಬಸವರಾಜ ಗುಳೇದ್ ಭೇಟಿ ನೀಡಿ ಪರಿಶೀಲಿಸಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net