ರಸ್ತೆ ಅಪಘಾತದಲ್ಲಿ ಲಾರಿ ಕ್ಲೀನರ್ ಸಾವು

accident-15
Published on

ಚಿತ್ರದುರ್ಗ: ನಗರದ ಮದಕರಿಪುರ ಸೇತುವೆ ಡಿಎಸ್‌ಹಳ್ಳಿ ಬಳಿ ಮಂಗಳವಾರ ಬೆಳಗಿನ ಜಾವ ಲಾರಿಯೊಂದು ನಿಂತಿದ್ದ ಲಾರಿ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಮೃತಪಟ್ಟಿದ್ದಾನೆ.
ಮೃತನನ್ನು ಕೊಪ್ಪಳ ಜಿಲ್ಲೆ ಕೆರೆಹಳ್ಳಿ ನಿವಾಸಿ, ಲಾರಿ ಕ್ಲೀನರ್ ಮಂಜು ಯಾನೆ ವೀರೇಶ್(20)ಎಂದು ಗುರುತಿಸಲಾಗಿದೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ಕಡೆಗೆ ತೆರಳುತ್ತಿದ್ದ ಈರುಳ್ಳಿ ತುಂಬಿದ್ದ ಲಾರಿ ಟೈರ್ ಸಿಡಿದು ನಿಂತಿತ್ತು. ಇದೇ ಮಾರ್ಗದಲ್ಲಿ ಬಂದ ಮತ್ತೊಂದು ಲಾರಿ, ಈರುಳ್ಳಿ ಇದ್ದ ಲಾರಿಗೆ ಡಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೂ ಅಪ್ಪಳಿಸಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವೀರೇಶ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸು ನೀಗಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net