ರಸ್ತೆ ಅಪಘಾತದಲ್ಲಿ ಮೂವರ ಮಕ್ಕಳ ಸಹಿತ ನಾಲ್ವರ ಸಾವು

b96625f3-f35d-490f-900b-9b181a6b8718--001
Published on

ಚಳ್ಳಕೆರೆ(ಚಿತ್ರದುರ್ಗ):ಚಳ್ಳಕೆರೆ ತಾಲೂಕು ಸಾಣೇಕೆರೆ ರಾ.ಹೆ.150 ಹೆಗ್ಗೆರೆ ಗೇಟ್ ಬಳಿ ಗುರುವಾರ ಬೆಳಗಿನ ಜಾವ 4.30ರ ಹೊತ್ತಿನಲ್ಲಿ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಮೂ ವರು ಮಕ್ಕಳ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ಗ್ರಾಮದ ಲಿಂಗಪ್ಪ(26)ಸಿಂಧುಶ್ರೀ(2),ಹಯ್ಯಳಪ್ಪ(5 ತಿಂಗಳು)ಹಾಗೂ ರಕ್ಷಾ(3ತಿಂಗಳು)ಮೃತರೆಂದು ಗುರುತಿಸಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಕಾರಿನ ಚಾಲಕ ನಾಗಪ್ಪ, ಯಲ್ಲಮ್ಮ,ಮಲ್ಲಮ್ಮ ಹಾಗೂ ಮೂರು ವರ್ಷದ ಬಾಲಕಿ ಯು ಮನಾ(3)ಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ನಿದ್ರೆ ತೂಕಡಿಕೆಯಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದಿದ್ದು,ಅದರ ರಭಸಕ್ಕೆ ಕಾರಿನ ಎಡಭಾಗ ಸಂಪೂ ರ್ಣ ನುಜ್ಜುಗುಜ್ಜಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ. ಗ್ರಾಮದಿಂದ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಚಳ್ಳಕೆರೆ ಪಿಎಸ್‌ಐ ಶಿವರಾಜ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net