

ಚಿತ್ರದುರ್ಗ: ಗೂಡ್ಸ್ ವ್ಯಾನ್ ಶುಕ್ರವಾರ ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಹೊಳಲ್ಕೆರೆ ತಾಲೂಕು ಲೋಕದೊಳಲು ಬಳಿಯ ಸೇತುವೆಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮೃತರನ್ನು ಹೊಳಲ್ಕೆರೆ ತಾಲೂಕು ಹೊಸಹಟ್ಟಿ ಗ್ರಾಮದ ಧರಣೇಂದ್ರಪ್ಪ (65), ರಂಗಪ್ಪ (39) ಎಂದು ಗುರುತಿಸಲಾಗಿದೆ. ಚಿತ್ರದುರ್ಗ ತಾಲೂಕು ಸಿಂಗಾಪುರದಿಂದ ಹೊಸದುರ್ಗ-ಹೊಳಲ್ಕೆರೆ ಮಾರ್ಗದಲ್ಲಿ ಈ ಅವಘಡವಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವ ಹೊಸಹಟ್ಟಿಯ ಬಸವರಾಜು, ಪ್ರದೀಪ್‌ಕುಮಾರ್, ಕೃಷ್ಣಕಾಂತ್ ಹಾಗೂ ಚಾಲಕ ರುದ್ರೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.