ರಸ್ತೆ ಅಡ್ಡಲಾಗಿ ಉರುಳಿದ ಮರ, ಪ್ರಯಾಣಿಕರ ಪರದಾಟ

25-kkr1
Published on


ಕಿಕ್ಕೇರಿ: ಹೋಬಳಿಯ ವಡಕಹಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಆಲದಮರ ಧರೆಗುರುಳಿದ ಪರಿಣಾಮ ಕೆಲಹೊತ್ತು ಪ್ರಯಾಣಿಕರು ಪರದಾಡಿದರು.


ಆಲದಮರ ಒಣಗಿತ್ತು. ಸತತ ನಾಲ್ಕೈದು ದಿನಗಳ ಹಿಂದೆ ಬಿದ್ದ ಮಳೆಗೆ ತೇವಾಂಶ ಹೆಚ್ಚಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ರಸ್ತೆ ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಚೌಡೇನಹಳ್ಳಿ ಮಾರ್ಗವಾಗಿ ಹಲವು ವಾಹನಗಳು ಸಂಚರಿಸಿದವು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೆಲಕಾಲ ಆತಂಕಕ್ಕೆ ಒಳಗಾದರು. ವಿಷಯ ತಿಳಿದ ಆರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ನೆರವಿನೊಂದಿಗೆ ಮರವನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಉಪವಲಯ ಅರಣ್ಯಾಧಿಕಾರಿ ರಮೇಶ್, ಸಿಬ್ಬಂದಿ ರವಿ, ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net