ರಸ್ತೆ ಅಗೆದು ಜಾಗ ಒತ್ತುವರಿಯಾಗಿರುವುದಕ್ಕೆ ಜನರ ಆಕ್ರೋಶ

24web
ರಸ್ತೆಯನ್ನೇ ಅಗೆದು ಜಾಗ ತಮಗೆ ಸೇರಿದೆ ಎಂದು ಕಿಡಿಗೇಡಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಹಿನಕಲ್ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಎಚ್.ಸಿ.ರಾಜು ,ಹೊನ್ನಪ್ಪ, ಎಚ್.ವಿ.ಬಸವರಾಜು, ಕೇಬಲ್ ಪಾಪಣ್ಣ, ಹಿನಕಲ್ ಪ್ರಕಾಶ್, ದೇವರಾಜು, ಎಚ್. ಜವರಪ್ಪ, ಗಣೇಶ್, ಕಿರಣ್‌ಕುಮಾರ್, ವಿಜಯ್, ರೇವಣ್ಣ ಇತರರು ಇದ್ದರು.
Published on

ಮೈಸೂರು: ರಸ್ತೆ ಅಗೆದು ಜಾಗ ತಮಗೆ ಸೇರಿದೆ ಎಂದು ಕಿಡಿಗೇಡಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಹಿನಕಲ್ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಇ.ಪಿ.ಆರ್. ಬಾರ್ ಮುಂದೆ ಸಾಗುವ ರಸ್ತೆಯನ್ನು ಕಿಡಿಗೇಡಿಗಳು ಅಗೆದು ರಸ್ತೆಯೇ ನಮಗೆ ಸೇರಬೇಕು ಎಂದು ಸಾರ್ವಜನಿಕರಿಗೆ ತೊಂದರೆ ನೀಡಿರುವುದಲ್ಲದೆ ನಿವೇಶನಗಳ ಕಾಂಪೌಂಡ್ ಒಡೆದು ದಾಂಧಲೆ ನಡೆಸಿದ್ದಾರೆ. ಸರ್ವೇ ನಂ.54ರಲ್ಲಿ ಈ ಬಡಾವಣೆ ನಿರ್ಮಾಣವಾಗಿ 40 ವರ್ಷಗಳೇ ಕಳೆದಿವೆ. 1986ರಲ್ಲಿ ಈರಣ್ಣ ಎಂಬುವರು ಮಾರಾಟ ಮಾಡಿದ್ದರೂ ಅವರ ಮಕ್ಕಳಾದ ಇ.ಪಿ.ಆರ್. ಬಾರ್‌ನ ರಘು ಮತ್ತು ಪುಟ್ಟರಾಜು ಅವರು ರಸ್ತೆಯನ್ನು ಅಗೆದು ಖಾಲಿ ನಿವೇಶನದ ಕಾಂಪೌಂಡ್‌ಗಳೆಲ್ಲ ಒಡೆದು ಬಡವರು ವಾಸವಿರುವ ಶೀಟ್ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ರಸ್ತೆ ಜಾಗ ತಮಗೆ ಸೇರಿದ್ದು ಎಂದು ನಡೆಸಿರುವ ಈ ದಾಂಧಲೆ ಕುರಿತು ನಗರಸಭೆ ಅಧಿಕಾರಿಗಳು, ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ. ನಗರಸಭೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಾಳಿದಾಸ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ರಾಜು , ಹಿನಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊನ್ನಪ್ಪ, ಮುಖಂಡರಾದ ಎಚ್.ವಿ.ಬಸವರಾಜು, ಕೇಬಲ್ ಪಾಪಣ್ಣ, ಸಿದ್ದರಾಮಯ್ಯ ಅಭಿಮಾನಿ ಬಳಗದ ಹಿನಕಲ್ ಪ್ರಕಾಶ್, ದೇವರಾಜು, ಎಚ್.ಜವರಪ್ಪ, ಗಣೇಶ್, ಕಿರಣ್‌ಕುಮಾರ್, ವಿಜಯ್, ರೇವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net