ರಸ್ತೆ ಅಗಲೀಕರಣದಲ್ಲಿ ಆಗಿದೆ ತಾರತಮ್ಯ

PHOTO-1--01
Published on

ಚಿತ್ರದುರ್ಗ: ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್‌ಗಳ ತೆರವಿನೊಂದಿಗೆ, ವಿಶಾಲ ರಸ್ತೆ ಹಾಗೂ ಫುಟ್ ಪಾತ್ ನಿರ್ಮಿಸುವ ಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ವಿಧಾನಸಭೆ ಅಧಿವೇಶನದಲ್ಲಿ ಚಿತ್ರ ದುರ್ಗದಲ್ಲಿ ಡಿವೈಡರ್ ತೆರವುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದು ಸ್ವಾಗತಾರ್ಹ. ಆದರೆ ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ಲೋಕೋಪಯೋಗಿ ಇಲಾಖೆ ಗುರುತಿಸಿರುವಂತೆ ರಸ್ತೆ ಅಗಲೀಕರಣವಾಗಿಲ್ಲ.
ಇದೇ ರೀತಿ ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ, ಮೆದೇಹಳ್ಳಿ ರಸ್ತೆ ಹಾಗೂ ಜೆಸಿಆರ್, ಜೋಗಿಮಟ್ಟಿ ರಸ್ತೆಗಳೂ ನಿಗದಿಯಂತೆ ಅಗಲೀ ಕರಣವಾಗಿಲ್ಲ. ರಸ್ತೆ ಅಗಲೀಕರಣದಲ್ಲಿ ತಾರತಮ್ಯವಾಗಿದೆ. ಎಸ್‌ಬಿಎಂ ಸರ್ಕಲ್‌ನಲ್ಲಿ ಅವೈಜ್ಞಾನಿಕವಾಗಿ ಸಿಗ್ನಲ್‌ಲೈಟ್ ಅಳವಡಿಸಲಾಗಿದೆ. ತುರುವನೂರು ರಸ್ತೆಯಲ್ಲಿ, ರಸ್ತೆ ಅತಿಕ್ರಮಣವಾಗುತ್ತಿದ್ದು,ವಾಹನಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ನಗರದಲ್ಲಿ ರಸ್ತೆ, ಫುಟ್‌ಪಾತ್‌ಗಳನ್ನು ನುಂಗಿ ನೀರು ಕುಡಿದಿದೆ ಎಂದು ಶಿವಕುಮಾರ್ ಆರೋಪಿಸಿದರು. ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಗೋಪಿನಾಥ್, ಸಿ.ಜಗದೀಶ್, ಸುರೇಶ್, ಅಖಿಲೇಶ್, ಮಹಮದ್‌ರಫಿ, ಶಾನ್, ಅವಿನಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net