ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

CTD RASTE MANAVI----
Published on

ಚಿತ್ರದುರ್ಗ: ನಗರದ ರಸ್ತೆ ಅಗಲೀಕರಣ,ರಾಜ ಕಾಲುವೆಗಳ ಒತ್ತುವರಿಗೆ ತೆರವಿಗೆ ಒತ್ತಾಯಿಸಿ ಅಹಿಂದ ಚಳವಳಿ ಪದಾಧಿಕಾರಿಗಳು ಡಿಸಿ ಟಿ.ವೆಂಕ ಟೇಶ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಚಳ್ಳಕೆರೆ ಟೋಲ್‌ಗೇಟ್‌ನಿಂದ ಜೆಎಂಐಟಿ ಸರ್ಕಲ್‌ವರೆಗೆ,ಹೊಳಲ್ಕೆರೆ ರಸ್ತೆ,ಮೆದೇಹಳ್ಳಿ ರ ಸ್ತೆ ಹಾಗೂ ಕೋಟೆ ರಸ್ತೆ ಅಗಲೀಕರಣವಾಗಬೇಕು.

ನಗರದ ಬಹುತೇಕ ಕಡೆ ರಾಜಕಾಲುವೆಗಳು ಒತ್ತುವರಿಯಾಗಿದ್ದು,ಅವುಗಳನ್ನು ತೆರವು ಗೊಳಿಸ ಬೇಕೆಂದು ಆಗ್ರಹಿಸಿದರು. ಪಾದಚಾ ರಿಗಳಿಗೆ ಫುಟ್‌ಪಾತ್ ಇಲ್ಲ.ವಾಹನಗಳನ್ನು ರಸ್ತೆಯಲ್ಲಿ ನಿಲ್ಲುಸುತ್ತಿರುವುದರಿಂದಾಗಿ ಸಂಚಾರ ದಟ್ಟಣೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಶಾಸಕ ರು,ಸಚಿವರು,ಸಂಸದರು ರಸ್ತೆ ಅಗಲೀಕರಣಕ್ಕೆ ಒತ್ತು ಕೊಡಬೇಕೆಂದು ಒತ್ತಾಯಿಸಿದರು. ಅಹಿಂದ ಚಳವಳಿಯ ಜಿಲ್ಲಾ ಮುಖ್ಯಸಂಚಾ ಲಕ ಟಿ.ಕೆಂಚಪ್ಪ,ಸತ್ಯಪ್ಪ ಮಲ್ಲಾಪುರ,ಅನಂತಕುಮಾರ್,ಎಚ್.ಆನಂದಕುಮಾರ್,ಮಲ್ಲಿ ಕಾರ್ಜುನ,ತಿಪ್ಪೇಸ್ವಾಮಿ,ರಾಜಪ್ಪ, ಕುಬೇಂದ್ರ ನಾಯ್ಕ,ಜ್ಯೋತಿಲಕ್ಷ್ಮೀ,ವಿನೋದಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net