ರಸಗೊಬ್ಬರ ಮಾರಾಟಗಾರರಿಗೆ ಪಾಯಿಂಟ್ ಆಫ್ ಸೇಲ್ ಯಂತ್ರ

CTD RASAGOBBARA POS------
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಬಿರುಸಿನ ಚಾಲನೆ ದೊರೆತ ನಡುವೆಯೇ ಕೇಂದ್ರದ ನಿರ್ದೇಶದಂತೆ ಡಿಬಿಟಿಯಡಿ ಆಧುನಿಕ ಪಿಒಎಸ್ ಯಂತ್ರಗಳನ್ನು ರಾಜ್ಯ ಕೃಷಿ ಇಲಾಖೆ ರಸಗೊಬ್ಬರ ಮಾರಾಟ ಸಂಸ್ಥೆಗಳಿಗೆ, ಮಾರಾಟಗಾರರಿಗೆ ವಿತರಿಸುತ್ತಿದೆ.

ಕೃಷಿಯೇತರ ಚಟುವಟಿಕೆಗೆ ಸಬ್ಸಿಡಿ ದರದ ರಸಗೊಬ್ಬರಗಳ ದುರ್ಬಳಕೆ ತಪ್ಪಿಸಲು 2018 ರಿಂದ ವ್ಯಾಪಾರಕ್ಕೆ ಮಾರಾಟಗಾರರು ಪಿಒಎಸ್ ಬಳಸುವ ನಿಯಮ ಜಾರಿಯಲ್ಲಿದೆ. ಆಧಾರ್ ನಂ., ಬಯೋಮೆಟ್ರಿಕ್‌ನೊಂದಿಗೆ ಸಿಮ್ ಕಡ್ಡಾಯ ಹಾಗೂ ವೈಫೈ ಬಳಕೆಯೂ ಸಾಧ್ಯವಿದ್ದ ಎಲ್-0 ಮಾದರಿ ಪಿಒಎಸ್‌ಗಳನ್ನು ಈವರೆಗೆ ಬಳಸಲಾಗುತ್ತಿತ್ತು.

ಈಗ ಹಳೆಯ ಪಿಒಎಸ್‌ಗಳನ್ನು ಹಿಂಪಡೆದು, ಬಯೋಮೆಟ್ರಿಕ್ ಇರುವ, ಸಿಮ್ ಕಡ್ಡಾಯವಲ್ಲದ ವೈಫೈ ಮೂಲಕ ಅತ್ಯಂತ ವೇಗ ವಾಗಿ ಕಾರ್ಯನಿರ್ವಹಿಸುವ ಒಎಸ್(ಆಪರೇಷನ್ ಸಿಸ್ಟಮ್) ಹಾಗೂ ದೊಡ್ಡ ಡಿಸ್‌ಪ್ಲೇ ಹೊಂದಿರುವ ಎಲ್-1 ಆಂಡ್ರಾಯ್ಡಾ ಪಿಒಎಸ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳ 15,483 ಮಾರಾಟಗಾರರಿಗೆ ಈ ಡಿವೈಸ್‌ಗಳನ್ನು ಮೇ ಅಂತ್ಯದೊಳಗೆ ವಿತರಿಸಬೇಕಿದೆ. ಮಾರಾಟದ ರಿಯ ಲ್ ಟೈಮ್ ಡೇಟಾ ಸಂಗ್ರಹ ಸಾಧ್ಯವಿರುವ ಯಂತ್ರಗಳ ಹಂಚಿಕೆ ಗುರಿಯನ್ನು ವಿವಿಧ ರಸಗೊಬ್ಬರ ಮಾರಾಟ ಕಂಪನಿಗಳಿಗೆ ನಿಗದಿಪಡಿಸಲಾಗಿದೆ.

ವಿವಿಧ ಜಿಲ್ಲೆಗಳಿಗೆ ವಿತರಿಸಿರುವ ಪಿಒಎಸ್‌ಗಳು

ಬಾಗಲಕೋಟೆ-754, ಬೆಂಗಳೂರು ಗ್ರಾಮಾಂತರ 173.ಬೆಂಗಳೂರು ನಗರ 106, ಬೆಳಗಾವಿ 2052, ಬಳ್ಳಾರಿ 464, ಬೀದರ್ 293, ವಿಜಯಪುರ 704, ಚಾಮರಾಜನಗರ 370, ಚಿಕ್ಕಮಗಳೂರು 408, ಚಿಕ್ಕಬಳ್ಳಾರಪುರ 312, ಚಿತ್ರದುರ್ಗ 413, ದಾವಣಗೆರೆ 698, ಧಾರವಾಡ 334, ಗದಗ 376, ಕಲಬುರಗಿ 499, ಹಾಸನ 726, ಹಾವೇರಿ 739, ಕೊಡಗು 162, ಕೋಲಾರ 279, ಕೊಪ್ಪಳ 581, ಮಂಡ್ಯ 581, ಮೈಸೂರು 770, ಉತ್ತರ ಕನ್ನಡ 189, ರಾಯಚೂರು 755, ರಾಮನಗರ 276, ಶಿವಮೊಗ್ಗ 612, ದಕ್ಷಿಣ ಕನ್ನಡ 229, ತುಮಕೂರು 613, ಉಡುಪಿ 124, ವಿಜಯನಗರ 481 ಹಾಗೂ ಯಾದಗಿರಿ 410 ಸೇರಿ 15,483 ಯಂತ್ರಗಳನ್ನು ರಾಜ್ಯದ ಮಾರಾಟಗಾರರಿಗೆ ವಿತರಿಸಲಾಗುತ್ತಿದೆ.

ಇನ್ನುಳಿದ ಮಾರಾಟಗಾರರಿಗೂ ಯಂತ್ರಗಳನ್ನು ವಿತರಿಸಬೇಕಿದೆ. ಅಗತ್ಯ ಪಿಒಎಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.

...ಕೋಟ್...

ಸಬ್ಸಿಡಿ ಮೈನಸ್ ಆಗಿ ಎಂಆರ್‌ಪಿ ನಿಗದಿಯಾಗಿರುವ ರಸಗೊಬ್ಬರಗಳನ್ನು ಕೃಷಿಯೇತರ ಚಟುವಟಿಕೆಗೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಹಾಗೂ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಮೊತ್ತ ಪಾವತಿಯಲ್ಲಿ ಪಾರದರ್ಶಕತೆ ತರಲು ಈ ಪಿಒಎಸ್‌ಗಳು ನೆರವಾಗಿವೆ.

ಡಾ.ಬಿ. ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ ಚಿತ್ರದುರ್ಗ.

---

---ಕೋಟ್---

ಕೃಷಿ ಇಲಾಖೆಯಿಂದ ಅಂದಾಜು 40 ಸಾವಿರ ರೂ. ಮೌಲ್ಯದ ಪಿಒಎಸ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮೊದಲಿದ್ದ ಯಂತ್ರಕ್ಕಿಂತ ಇದು ಆಪ್‌ಡೇಟ್ ಆಗಿದೆ. ಬಯೋಮೆಟ್ರಿಕ್ ಸಾಧ್ಯವಾಗದಿದ್ದರೆ ಒಟಿಪಿಗೆ ಇದರಲ್ಲೂ ಅವಕಾಶವಿದೆ.

ವಸಂತ್‌ಕುಮಾರ್, ಅಧ್ಯಕ್ಷರು,

ಶ್ರೀನಿಧಿ ರೈತ ಉತ್ಪಾದಕ ಕಂಪನಿ, ಭರಮಸಾಗರ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net