

ಚಿತ್ರದುರ್ಗ: ರೈತರು ಸ್ವಾವಲಂಬಿಗಳಾಬೇಕೆಂದು ಯೋಗಗುರು ಶ್ರೀಚನ್ನಬಸವಣ್ಣ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿರುವ ವಿಶೇಷ ಪ್ರವಚನ ಮಾಲೆ ಶುಕ್ರವಾರದ ಕಾರ‌್ಯಕ್ರಮದಲ್ಲಿ ಸಾವಯವ ಆಹಾರದಿಂದ ಸಂಪೂರ್ಣ ಆರೋಗ್ಯ ಕುರಿತು ಮಾತನಾಡಿ, ರೈತರು ಗೊಬ್ಬರ, ಬೀಜ, ಕ್ರಿಮಿನಾಶಕ ತಾವೇ ಸಿದ್ಧಪಡಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ರಸಗೊಬ್ಬರ, ಕ್ರಿಮಿನಾಶಕಗಳಿಂದಾಗಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿ ಶುದ್ಧಗೊಳಿಸಬೇಕಿದೆ ಎಂದರು.
ಹುಲಸೂರು ಗುರು ಬಸವೇಶ್ವರ ವಿರಕ್ತ ಮಠದ ಶಿವಾನಂದ ಶ್ರೀ ಮಾತನಾಡಿ, ತಾವು ಕೃಷಿ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದು, ನಮ್ಮ ಮಠ ಕೃಷಿಗೆ ಆದ್ಯತೆ ನೀಡಿದೆ ಎಂದರು.
ಹೊಸದಿಲ್ಲಿಯ ಮಹಾಂತ ಶ್ರೀ ಮಾತನಾಡಿದರು. ಡಾ. ಬಸವಕುಮಾರ ಶ್ರೀ, ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಶಿವನಾಂದ ಶ್ರೀ, ಬಸವರಾಜ ದೇವರು, ಬಸವ ಮಲ್ಲಿಕಾರ್ಜುನ ಶ್ರೀ, ಬಸವಲಿಂಗ ಮೂರ್ತಿ ಶ್ರೀ, ಸಿದ್ದಬಸವ ಕಬೀರ ಶ್ರೀ, ಬಸವ ಮಹಾಂತ ಶ್ರೀ , ಚನ್ನಬಸವ ಶ್ರೀ , ಪ್ರಾಚಾರ್ಯರಾದ ಡಾ.ಪಿ.ಬಿ. ಭರತ್, ಪಿ.ಎಂ.ಜಿ.ರಾಜೇಶ್ ಮತ್ತಿತರರು ಇದ್ದರು. ಪ್ರೊ.ಎಸ್.ಚೇತನ್ ಎಸ್. ನಿರೂಪಿಸಿ, ಪ್ರೊ.ಆರ್.ಎಸ್. ಜಯದೇವಪ್ಪ ವಂದಿಸಿದರು.